ಬಳ್ಳಾರಿ : ಅಕ್ಟೋಬರ್ 2 ಶ್ರೀ ಮಹಾತ್ಮ ಗಾಂಧೀಜಿ ಹಾಗೂ ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ ಜಿ, ಇವರ ಜಯಂತಿ ಅಂಗವಾಗಿ ಶ್ರೀ ಮಹಾತ್ಮ ಗಾಂಧೀಜಿ ಹಾಗೂ ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿಜಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಹಾಗೂ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸಮನ್ವಯ ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕದ
ವತಿಯಿಂದ ಹಾಗೂ ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀಧರ್ ಗಡ್ಡೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗದ ಸಹಯೋಗದೊಂದಿಗೆ ಶ್ರೀಧರಗಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊರ್ಲಗುಂದಿ ಹಾಗೂ ಸಿರಿವಾರ ಕ್ಲಸ್ಟರ್ ಮಟ್ಟದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಮಗ್ಗಿಗಳು ಬರೆಯುವುದು, ಹೇಳುವುದು ಹಾಗೂ ಭಾಷಣ ಸ್ಪರ್ಧೆಗಳನ್ನು ಶ್ರೀಧರಗಡ್ಡೆ ಶಾಲೆಯಲ್ಲಿ ಏರ್ಪಡಿಸಲಾಗಿತ್ತು, ಹಾಗೂ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಸೂಕ್ತ ಬಹುಮಾನಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆಯ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ನಯಮೂರ್ ರೆಹಮಾನ್ , ಬಿ ಆರ್ ಸಿ ಮಲ್ಲಪ್ಪ, ಸಿಆರ್‌ಪಿ ರವಿಚಂದ್ರ ಹಾಗೂ ಬಸವರಾಜ್ ,ಶ್ರೀಧರ ಗಡ್ಡೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಗೋಪಾಲ್, ಗ್ರಾಮ ಪಂಚಾಯತಿ ಸದಸ್ಯರುಗಳಾದ, ಶ್ರೀಮತಿ ಹೇಮಾ, ಪರಶುರಾಮ ಹುಲಿಯಪ್ಪ ವಿರೂಪಾಕ್ಷ ಜಿ ಬಸವರಾಜ, ಮತ್ತು ಗ್ರಾಮದ ಪ್ರಮುಖರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳಾದ, ಶ್ರೀ ಯಾಟೆ ದೊಡ್ಡಬಸಪ್ಪ, ಹಳ್ಳಿ ಜಂಬುನಾಥ, ಶಿವಶಂಕರ ರಮೇಶ,ಅಗಸರ ಹುಲೆಪ್ಪ, ಶ್ರೀಮತಿ ಛಾಯಾ ಮಂಜುನಾಥ,
ಎಸ್ ಡಿಎಂಸಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಲಕ್ಷ್ಮಣ.ಎಸ್ ಭಂಡಾರಿ, ಮತ್ತು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎಸ್ ಸಾವಿತ್ರಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಎಚ್ಎಂ ವಿರೂಪಾಕ್ಷಯ್ಯ, ಶಾಲಾ ಶಿಕ್ಷಕ ಸಿಬ್ಬಂದಿ ವರ್ಗದವರಾದ, ನರಸನಗೌಡ, ಸಾವಿತ್ರಿ, ಜಯಶ್ರೀ ಉಮಾಮಹೇಶ್ವರ ಶೆಟ್ಟಿ, ವಿಜಯಮ್ಮ ಸುಮಿತ್ರ ,ಅನಿಲ್, ಸರಸ್ವತಿ, ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಆಗಮಿಸಿದ್ದರು.
ಈ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳ ತಂಡದಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ಶ್ರೀ ನಯಿಮು ರಹಮಾನ್ ಮಾತನಾಡಿ ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯು ಬಹಳ ಉತ್ಸಾಹದಿಂದ ಸರ್ಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ಎಂದು ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿಗಾಗಿ ಇಂತಹ ಸ್ಪರ್ಧಾತ್ಮಕ
ಚಟುವಟಿಕೆಗಳನ್ನು ಏರ್ಪಡಿಸುತ್ತಿರುವುದು ಹೆಮ್ಮೆಯ ಸಂಗತಿ, ಶಿಕ್ಷಣವು ವ್ಯಾಪಾರಿಕರಣವಾಗಿರುವ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಜನಸಾಮಾನ್ಯರು ಸಹ ಉಚಿತವಾಗಿ ಸರ್ವರಿಗೂ ಶಿಕ್ಷಣವು ದೊರೆಯಬೇಕಾದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು, ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಆದರ್ಶ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ
ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಜೆ ವಿ ಮಂಜುನಾಥ್ ರವರು ಮಾತನಾಡಿ, ನಮ್ಮ ವೇದಿಕೆಯು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಸ್ಥಳೀಯ ಗ್ರಾಮಗಳ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿಕೊಟ್ಟು ಅಲ್ಲಿನ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುವುದರ ಜೊತೆಗೆ ಪ್ರತಿಯೊಂದು
ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳಿಗೆ ಅವರ ಮಹತ್ವದ ಜವಾಬ್ದಾರಿಗಳನ್ನು ತಿಳಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಕೈಜೋಡಿಸಿ ಮಹತ್ತರ ಬದಲಾವಣೆಗಳನ್ನು ತರುವುದೇ ನಮ್ಮ ಮೂಲ ಉದ್ದೇಶವಾಗಿದೆ. ಎಂದು ತಿಳಿಸಿದರು, ಹಾಗೂ ಈ ದೇಶದಲ್ಲಿ ಯಾವುದಾದರೂ ಒಂದು ವೃತ್ತಿ ಆತ್ಮತೃಪ್ತಿ ನೀಡುತ್ತದೆ ಎನ್ನುವುದು ಯಾವುದಾದರು ಇದ್ದರೆ ಅದು ಶಿಕ್ಷಕ ವೃತ್ತಿ ಮಾತ್ರ, ಆದ್ದರಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಶಿಕ್ಷಕರ ಪಾತ್ರವೂ ಸಹ ಮಹತ್ವದ ಜವಾಬ್ದಾರಿ ವಹಿಸುತ್ತದೆ, ಆದುದರಿಂದ ನಿಮ್ಮ ಶಿಕ್ಷಕರ ಸಂಘಗಳ ವತಿಯಿಂದಲೂ ಸಹ ಹೆಚ್ಚಿನ ಮಟ್ಟಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಧ್ವನಿಗೂಡಿಸಬೇಕೆಂದು ಕರೆ ನೀಡಿದರು. ಮತ್ತು ಶ್ರೀಧರ್ ಗಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳೀಯ ಸಮಸ್ಯೆಗಳ ಪರಿಹಾರದ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಭೆಯಲ್ಲಿ ಮನವಿ ಮಾಡಲಾಯಿತು.
ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರತಿಯೊಬ್ಬ ಸ್ಪರ್ಧಾರ್ಥಿಗಳಿಗೂ ಸಹ ಪ್ರಶಸ್ತಿಪತ್ರ ಹಾಗೂ ಸೂಕ್ತ ಬಹುಮಾನಗಗಳನ್ನು ಗಣ್ಯಮಾನ್ಯರಿಂದ ವಿತರಿಸಲಾಯಿತು. ಹಾಗೂ ವಿಜೇತರಿಗೆ ಅಕ್ಟೋಬರ್ 2 ಶ್ರೀ ಮಹಾತ್ಮ ಗಾಂಧೀಜಿ ಜಯಂತಿ ಎಂದು ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.
ಮಗ್ಗಿಗಳು ಬರೆಯುವುದು ಓದುವುದು ಹೇಳುವುದು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ವಿಜೇತ 9ನೇ ತರಗತಿ ಸರ್ಕಾರಿ ಶಾಲೆ ಕಪ್ಪಗಲ್ಲು, ದ್ವಿತೀಯ ಬಹುಮಾನ ಹೇಮಲತಾ ಸರ್ಕಾರಿ ಶಾಲೆ ಶ್ರೀಧರ ಗಡ್ಡೆ, ತೃತೀಯ ಬಹುಮಾನ ಶಿವಪ್ರಸಾದ್ ಸರ್ಕಾರಿ ಶಾಲೆ ಹಂದ್ಯಾಳ್, ಹಾಗೂ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ವಿಜೇತ ಮಲ್ಲೇಶ್ವರಿ ಸರ್ಕಾರಿ ಶಾಲೆ, ಕಪುಗಲ್ಲು, ದ್ವಿತೀಯ ವಿಜೇತ ಕೆ ಗುರುರಾಜ್ ಸರ್ಕಾರಿ ಶಾಲೆ ಗುಡದೂರ್, ತೃತೀಯ ಬಹುಮಾನ ಉಮಾದೇವಿ ಸರ್ಕಾರಿ ಶಾಲೆ, ಕಪ್ಪಗಲ್ಲು,
ಮತ್ತು ಬಂದಂತಹ ಎಲ್ಲಾ ಗಣ್ಯ ಮಾನ್ಯರಿಗೆ ವೇದಿಕೆ ವತಿಯಿಂದ ಸನ್ಮಾನಿಸಿ ಸವಿನೆನಪಿನ ಕಾಣಿಕೆ ನೀಡುವುದರ ಮೂಲಕ ಸತ್ಕರಿಸಲಾಯಿತು.
ಈ ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ವಂದನಾರ್ಪಣೆಯನ್ನು ಶಿಕ್ಷಕರಾದ ಶ್ರೀ ರಮೇಶ್ ರವರು ನೆರವೇರಿಸಿ ಕೊಟ್ಟರು.