ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಎತ್ತ ನೋಡಿದರು ಸಾಲು ಸಾಲು ಕಲ್ಲು ಗುಡ್ಡಗಳೇ ಕಾಣುತ್ತವೆ ಉತ್ತಮ ಮಳೆಯಾದರೆ ಸಾಲು ಸಾಲು ಕಲ್ಲು ಗುಡ್ಡಗಳಲ್ಲಿ ಮಧ್ಯ ಸಾಕಷ್ಟು ಸೀತಾಫಲ ಗಿಡಗಳು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸೀತಾಫಲ ಗಿಡಗಳನ್ನು ನಾವು ನೋಡಬಹುದಿತ್ತು.
ಕೂಡ್ಲಿಗಿ ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯ ಪರಿಣಾಮ ರೈತರಿಗೆ ನೈಸರ್ಗಿಕವಾಗಿ ಬೆಟ್ಟ, ಗುಡ್ಡಗಳಲ್ಲಿ ಕೈಗೆಟುಕುತ್ತಿದ್ದ ಸೀತಾಫಲ ಹಣ್ಣುಗಳು ಈ ಬಾರಿ ಅಪರೂವಾಗಿದ್ದು, ಮಳೆ ಇಲ್ಲದ ಕಾರಣ ಸೀತಾಫಲ ಹಣ್ಣುಗಳ ಗಿಡಗಳು ಒಣಗಿ ರೈತರಿಗೆ ತೀವ್ರ ನಿರಾಸೆ ಮೂಡಿಸುತ್ತಿವೆ.
ಮುಂಗಾರು ಸಮಯದಲ್ಲಿ ರೈತರು ಬಿತ್ತನೆ ಮಾಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ. ಗ್ರಾಮೀಣ ಭಾಗದದಲ್ಲಿ ಕುರಿ, ಮೇಕೆ, ದನ ಕಾಯುವ ಹುಡುಗರಿಗೆ ಹಾಗೂ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ರೈತರಿಗೆ ಕೃಷಿ ಕೂಲಿ ಕಾರ್ಮಿಕರಿಗೆ ಸೀತಾಫಲ ಹಣ್ಣುಗಳು ಸೇಬುನಷ್ಟೆ ರುಚಿ ಸವಿಯುತ್ತಿದ್ದರು ಮಳೆಗಾದಲ್ಲಿ ಸೀತಾಫಲ ಹಣ್ಣುಗಳು ಗ್ರಾಮೀಣ ಜನರಿಗೆ ಖಾಯಂ ಅತಿಥಿಯಾಗಿದ್ದವು. ಆದರೆ, ಈ ಬಾರಿ ಮಳೆ ಮಳೆರಾಯ ಮುನಿಸಿಕೊಂಡಿದ್ದರಿಂದ ತಾಲೂಕಿನ ಅತ್ಯಂತ ಆವರಿಸಿರುವ ಬರದ ಛಾಯೆಗೆ ಈ ಅಪರೂಪದ ಸೀತಾಫಲ ಹಣ್ಣುಗಳು ಕಣ್ಮರೆಯಾಗಿ ಗ್ರಾಮೀಣ ಜನರಲ್ಲಿ ಬೇಸರ ಮೂಡಿಸಿದೆ. ಕೂಡ್ಲಿಗಿ ತಾಲೂಕಿನಲ್ಲಿ ಉತ್ತಮ ಮಳೆಯಾದರೆ ಪಾಣಿ ಪಕ್ಷಿಗಳಿಗೂ ಕೂಡ ಸೀತಾಫಲ ಹಣ್ಣುಗಳು ಸಿಗುತ್ತಿತ್ತು ಈ ಬಾರಿ ಮಳೆ ಇಲ್ಲದ ಕಾರಣ ಪ್ರಾಣಿ ಪಕ್ಷಿಗಳಿಗೂ ಬರದ ಛಾಯೆ ಮೂಡಿದೆ
ಜರ್ಮಲಿ, ಚಕ್ಕ ಮಂಡೆ, ಗುಡೆಕೋಟೆ ಮತ್ತು ಕಕ್ಕುಪ್ಪೆಯಲ್ಲಿ ಅತಿ ಹೆಚ್ಚು ಸೀತಾಫಲ ಹಣ್ಣು ತುಂಬಾ ಫೇಮಸ್. ಬೇರೆ ಬೇರೆ ತಾಲೂಕು ನಿಂದಲೂ ಕೂಡ ರೈತರು ಸಾರ್ವಜನಿಕರು ಬಂದು ಸೀತಾಫಲ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಬಾರಿ ಮಳೆ ಇಲ್ಲದ ಕಾರಣ ಸೀತ ಫಲ ಗಿಡ ಈ ಬಾರಿ ಬರಗಾಲಕ್ಕೆ ಹಣ್ಣುಗಳು ಕಣ್ಮರೆ ಆಗುವಂತೆ ಮಾಡಿದೆ..
ಕೊಟ್ಟೆಗುಡ್ಡ ಮಾರಮ್ಮನ ದೇವಸ್ಥಾನ ಗುಡೆಕೋಟೆ ಭಾಗದ ಕರಡಿ ದಾಮ, ಗುಡ್ಡ ಗಾಡು, ಅರಣ್ಯ ಪ್ರದೇಶದಲ್ಲಿ ಸೀತಾಫಲ ಇತರೆ ಹಣ್ಣಿನ ಗಿಡಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಇಲಾಖೆ ಮಾಡುತ್ತಿದೆ. ಕಾಡಂಚಿನಲ್ಲಿರುವ ಕರಡಿ, ಚಿರತೆ, ತೋಳ, ನರಿ, ಕೋತಿ, ಪಕ್ಷಿಗಳು ಸೇರಿದಂತೆ ಇತರೆ ಪ್ರಾಣಿಗಳಿಗೆ ಘಮಲು ಕಂಡು ಬರುತ್ತಿದ್ದವು, ಆದರೆ ಮಳೆಯ ಅವಕೃಪೆ ಪರಿಣಾಮ ಈ ಬಾರಿ ಸೀತಾಫಲ ಹಣ್ಣುಗಳ ಫಸಲು ಕ್ಷೀಣಿಸಿದ್ದು, ಹಾಗಾಗಿ ಕರಡಿ ದಾಮದಲ್ಲಿ ನೀರಿನ ವ್ಯವಸ್ಥೆ ಇತರೆ ಹಣ್ಣು ಅಂಪಲುಗಳ ಸೌಕರ್ಯಗಳನ್ನು ಒದಗಿಸಲಾಗುವುದು. .
- ಉಪ ವಲಯ ಅರಣ್ಯ ಅಧಿಕಾರಿ ಮಂಜುನಾಥ ಗುಡೆಕೋಟೆ ಸುತ್ತಮುತ್ತಲು ಪ್ರದೇಶಗಳಲ್ಲಿ ಸಿಗುತ್ತಿದ್ದ ಸೀತಾಫಲ ಹಣ್ಣುಗಳು ಕಣ್ಮರೆ ಆಗಿದ್ದಾವೆ, ಗುಡ್ಡ, ಅರಣ್ಯ ಪ್ರದೇಶದಲ್ಲಿ ಸೀತಾಫಲ ಹಣ್ಣುಗಳ ಘಮಲು ಕಂಡು ಬರುತ್ತಿದ್ದ ವಯೋ ವೃದ್ಧರು, ರೈತರು, ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಮಳೆಗಾಲದಲ್ಲಿ ಅಷ್ಟೇ ಸೀತಾಫಲ ಹಣ್ಣಿನ ರುಚಿಯನ್ನು ಸವಿಯತ್ತಿದ್ದರು. ಆದರೆ, ಈ ಬಾರಿ ಮಳೆ ಕೊರತೆಯಿಂದ ಸೀತಾಫಲ ಹಣ್ಣುಗಳು ಕಾಣುವುದೇ ಅಪರೂಪವಾಗಿದೆ.
- ಮಾರೇಶ ಹಾಲಸಾಗರ ಹಟ್ಟಿ