ಬಳ್ಳಾರಿ : ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಅವರು ವಿವಿಧ ಕಾರ್ಯಕ್ರಮಗಳ ನಿಮಿತ್ತ ಅ.07ರಂದು ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಳ್ಳುವರು.
ಅಂದು ಬೆಳಿಗ್ಗೆ 09.30 ರಿಂದ 10.30 ರವರೆಗೆ ನಗರದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸುವರು. ನಂತರ ಬೆಳಿಗ್ಗೆ 11ರಿಂದ ಮಧ್ಯಾಹ್ನ 01.30 ರವರೆಗೆ ಜಿಲ್ಲಾ ಪಂಚಾಯತ್‍ನ ನಜೀರ್ ಸಾಬ್ ಸಭಾಂಗಣದಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಬಳಿಕ ಅಲ್ಲಿಯೇ, ಮಧ್ಯಾಹ್ನ 03 ರಿಂದ ಸಂಜೆ 04 ರವರೆಗೆ ಮಾಲೀಕ ವರ್ಗದ ಸಂಘಟನೆಗಳ/ ಆಡಳಿತ ವರ್ಗದವರ ಜೊತೆ ಸಭೆ ನಡೆಸುವರು. ಸಂಜೆ 04 ರಿಂದ 05 ರವರೆಗೆ ಕಾರ್ಮಿಕ ಸಂಘಟನೆಗಳ ಸಭೆ ನಡೆಸುವರು.