ಬಳ್ಳಾರಿ : ಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ರಾಜ್ಯಾಧ್ಯಕ್ಷರಾದ ಶಾಮ ಸುಂದರ ಅವರ ಆದೇಶದ ಮೇರೆಗೆ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಹೆಚ್ಚಿ ಸುಧಾಕರ್ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ ಹೆಗಡೆ ನಾಡು ನುಡಿ ನೆಲ ಜಲ ಭಾಷೆಗಾಗಿ ಸಾಕಷ್ಟು ದುಡಿಯುವೆ ಸಾಧ್ಯವಾದಷ್ಟು ಮಟ್ಟಿಗೆ ಹೋರಾಟಗಳನ್ನು ಮಾಡುವ ಮೂಲಕ ಜನರಲ್ಲಿ ಚೇತರಿಕೆ ತರುವೆ ಮುಂದಿನ ನನ್ನ ಸಂಘಟನೆಯ ರೂಪೇಶ್ಗಳನ್ನ ಹಾಗೂ ಕಾರ್ಯವೈಖರಿಯ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹಾಕಿಕೊಂಡು ಮುನ್ನಡೆಯುತ್ತೇನೆ ಎಂದು ಹೇಳಿದರು ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶಾಮ ಸುಂದರ್, ರಾಜ್ಯ ಘಟಕದ ಖಜಾಂಚಿ ಕೆ. ನಾಗರಾಜ್ ಜಿಲ್ಲಾಧ್ಯಕ್ಷರಾದ ಕೆ ಪಿ ಹಸೇನ್ ಸಂಘಟನೆಯ ನೂತನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜು ಬಳ್ಳಾರಿ ನಗರ ಘಟಕದ ಯುವ ಅಧ್ಯಕ್ಷರಾದ ನೂರ್,ಸೇರಿದಂತೆ ಅನೇಕರರು ಉಪಸ್ಥಿತರಿದ್ದರು.