ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮಾಜಿ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಪಿ.ಗಾದೆಪ್ಪ ಅವರ ಪತ್ನಿ ಪಿ.ಕವಿತಾ ಗಾದೆಪ್ಪ ರವರು ಇದೇ ತಿಂಗಳ 15 ರಂದು ನಡೆಯುವ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಇತರೆ ಸಹಕಾರ ಸಂಘಗಳ. ಕ್ಷೇತ್ರದಿಂದ ಸ್ಪರ್ಧೆ ಬಯಸಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮ ಪತ್ರ ಸಲ್ಲಿಸಲುಕೊನೆಯ ದಿನಾವಾದ ಇಂದು ಹೊಸಪೇಟೆಯಲ್ಲಿ ಚುನಾವಣಾಧಿಕಾರಿಗೆ ಕವಿತಾ ಅವರು ತಮ್ಮ ಪತಿ ಮತ್ತಿತರ ಸಹಕಾರಿಗಳ ಜೊತೆ ನಾಮಪತ್ರ ಸಲ್ಲಿಸಿದರು. ಕಳೆದ 1998 ರಿಂದ ಸಹಕಾರಿ ಧುರೀಣ, ಎಂ.ಪಿ.ರವೀಂದ್ರ ಅವರ ಗರಡಿಯಲ್ಲಿ ಮೂರು ಬಾರಿ ಬ್ಯಾಂಕಿನ ನಿರ್ದೇಶಕರಾಗಿದ್ದ ಪಿ.ಗಾದೆಪ್ಪ ರವರು ಈ ಬಾರಿ ತಮ್ಮ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ.