ಕೂಡ್ಲಿಗಿ : ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಮೆಕ್ಕೆಜೋಳಕ್ಕೆ ಆಕಸ್ಮಿಕ ಬೆಂಕಿ ತಗುಲಿ 30 ಸಾವಿರ ರೂ. ನಷ್ಟ ಸಂಭವಿಸಿದೆ. ಗ್ರಾಮದ ಮಾರಪ್ಪ ತಂದೆ ದುರುಗಪ್ಪ ಆದಿ ಕರ್ನಾಟಕ ಜನಾಂಗದ ರೈತನಿಗೆ ಸೇರಿದ 2.60 ಸೆ. ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮೇತೆ ಸಮೇತ ಹೊಲದ ಇದ್ದ ಸೆಪ್ಪೆ, ತೆನೆ ಸಮೇತ ಮಂಗಳವಾರ ಆ,24 ರ ಬೆಳಿಗ್ಗೆ 11:00 ಗಂಟೆ ವೇಳೆ ಆಕಸ್ಮಿಕವಾಗಿ ಹೊಲದಲ್ಲಿದ್ದ ಮೆಕ್ಕೆಜೋಳ ತೆನೆ ಸೆಪ್ಪೆಗೆ ಬೆಂಕಿ ತಗುಲಿದೆ. ಇದನ್ನು ಕಂಡ ಅಕ್ಕಪಕ್ಕದ ಜಮೀನಿನವರು ಮತ್ತು ಹೊಲದ ಬಳಿ ಕೆಲಸ ನಿರ್ವಹಿಸುತ್ತಿದ್ದ ಕೆಲವರು ವಿಷಯ ತಿಳಿಸಿದ್ದು, ನಾನು ಕೂಡಲೇ ನನ್ನ ಮಗ ಇತರರೊಂದಿಗೆ ಹೊಲಕ್ಕೆ ಹೋಗಿ ನೋಡಲಾಗಿ ಹೊಲದಲ್ಲಿ ಮೆಕ್ಕೆಜೋಳ ತೆನೆಯ ಸಮಿತವಾಗಿ ಸುಮಾರು 1 ಎಕರೆ ಎಷ್ಟು ಸಂಪೂರ್ಣವಾಗಿ ಸುಟ್ಟು ಹೋಗಿರುತ್ತದೆ. ರಸ್ತೆಯಲ್ಲಿ ಹೋಗುವಾಗ ಯಾರು ಬಿಡಿ, ಸೀಕ್ರೆಟ್ ಹಚ್ಚಿ ಆರಿಸದೆ ಹಾಗೆ ಅಕ್ಕಿ ಹೋಗಿದ್ದರಿಂದ ಮೆಕ್ಕೆಜೋಳದ ಬೆಳೆ ಆಕಸ್ಮಿಕವಾಗಿ ಬೆಂಕಿ ಹತ್ತಿದೆ.
ಸುಮಾರು 25 ಕ್ವಿಂಟಾಲ್ ಜೋಳ ಬೆಂಕಿಗೆ ಆಹುತಿಯಾಗಿದೆ, ಸರ್ಕಾರದಿಂದ ಪರಿಹಾರ ಕೊಡಬೇಕೆಂದು ರೈತರಾದ ಮಾರಪ್ಪ ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಘಟನೆ ಸ್ಥಳಕ್ಕೆ ಕಾನಹೊಸಹಳ್ಳಿಯ ಪೊಲೀಸ್ ಠಾಣೆಯ ಎಎಸ್ಐ ಗೋವಿಂದಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.