18.3 C
New York
Wednesday, November 6, 2024

ದೇವಮಾನವ ಪುನೀತ್ ಅಗಲಿ 2ವರ್ಷ: ಅಭಿಮಾನಿಗಳಿಂದ ಸ್ಮರಣೆ

ಕೂಡ್ಲಿಗಿ: ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದಲ್ಲಿ ಡಾ ದಿ.ಪುನಿತ್ ರಾಜಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಪ್ಪು ಅಭಿಮಾನಿ ಬಳಗದಿಂದ ಪುಣ್ಯ ಸ್ಮರಣೆ ಆಚರಣೆ ಮಾಡಿದ್ದಾರೆ. ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದೀಪ ಬೆಳಗಿಸಿ ಅಪ್ಪು ಪೋಟೋಗೆ ನಮಸ್ಕರಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಿದರು. ಹಾಗೂ ಯುವ ಸಾಮ್ರಾಜ್ಯ ಕೂಡ್ಲಿಗಿ ಪೋಸ್ಟರ್ ಬಿಡುಗಡೆ ಮಾಡಿದರು, ಅಪ್ಪು ಅಭಿಮಾನಿಗಳಿಂದ ಅನ್ನದಾನ ನಡೆಯಿತು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ಮಾತನಾಡಿ ಅಪ್ಪು ಅವರ ಸಮಾಜ ಸೇವೆ, ಸಾಧನೆ ಅವರ ಮರಣಾನಂತರವೇ ಲೋಕಕ್ಕೆ ತಿಳಿಯುವಂತಾಯಿತು. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂಬ ಮನೋಭಾವದವರು ಇಷ್ಟು ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿರುವುದು ಅಭಿಮಾನಿಗಳಿಗೆ, ನಾಡಿಗೆ ಬಹುದೊಡ್ಡ ಆಘಾತವಾದಂತಾಗಿದೆ. ಅವರು ಸಾಮಾಜಿಕ ಕಳಕಳಿ, ಸೇವಾಮನೋಭಾವವನ್ನು ಎಲ್ಲರು ರೂಢಿಸಿಕೊಂಡರೆ ಅವರಿಗೆ ನಿಜವಾದ ಗೌರವ ಅರ್ಪಿಸುತ್ತದೆ.

ಈ ಕಾರ್ಯಕ್ರಮದಲ್ಲಿ ಹೂಡೇಂ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ, ಸದಸ್ಯರಾದ ಕುಮಾರರೆಡ್ಡಿ, ಕೆ.ಎನ್ ರಾಘವೇಂದ್ರ, ಸಾಕಮ್ಮ ಅಂಜಿನಪ್ಪ, ಗುರುಕನಕ ಸಂಸ್ಥೆಯ ಕಾರ್ಯದರ್ಶಿ ಬಿ ಟಿ ಮಂಜಣ್ಣ, ಎ‌.ಜಿ ಮಹದೇವಪ್ಪ, ಪೂಜಾರಿ ತಿಪ್ಪೇಸ್ವಾಮಿ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು ಸಿ.ಎಂ ಮಂಜುನಾಥ, ಕೆ ಸತೀಶ್ ಹಾಗೂ ಯುವ ಸಾಮ್ರಾಜ್ಯ ಕೂಡ್ಲಿಗಿ ಅಧ್ಯಕ್ಷರು ವಿಜಯ್, ಗೌರವಧ್ಯಕ್ಷ ಶಿವಕುಮಾರ್ ಮತ್ತು ಪದಾಧಿಕಾರಿಗಳು ಮತ್ತು ಪದಾಧಿಕಾರಿಗಳು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಗಲಿದ ನಟನ ಸಾಮಾಜಿಕ ಕಾರ್ಯಗಳನ್ನ ಸ್ಮರಿಸಿ ಕಂಬನಿ ಮಿಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles