ಕೂಡ್ಲಿಗಿ: ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಪ್ರೀತಿಸುವಂತಾಗಬೇಕು ಎಂದು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಸ್. ತಿಪ್ಪೇಸ್ವಾಮಿ ಹೇಳಿದರು. ಪಟ್ಟಣ ಹೋಬಳಿ ಕನ್ಮಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಹಮ್ಮಿಕೊಂಡ 68 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ತಾಯಿ ಭುವನೇಶ್ವರಿದೇವಿ ಪೂಜೆ, ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಈ ವೇಳೆ ಕ.ಸಾ.ಪ. ಹೊಸಹಳ್ಳಿ ಹೋಬಳಿ ಘಟಕದ ಸ್ಥಾಪಕ ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್ ಅವರು ಕನ್ನಡ ನಾಡು ನುಡಿಯ ಮಹತ್ವವ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಯು. ಜಗನ್ನಾಥ್, ಕ.ಸಾ.ಪ ಕೂಡ್ಲಿಗಿ ತಾಲೂಕು ಘಟಕದ ಗೌರವ ಗೋಶಾಧ್ಯಕ್ಷ ಕೆ. ಜಿ. ಕುಮಾರ ಗೌಡ್ರು, ಪ್ರಧಾನ ಕಾರ್ಯದರ್ಶಿ ಶ್ಯಾಮ ಸುಂದರ ಸಫಾರೆ, ಕೆ. ಸುಭಾಷ್ ಚಂದ್ರ, ಮತ್ತು ಯುವ ಕವಿಗಳಾದ ಧನಂಜಯ, ಗುರುಮೂರ್ತಿ, ಕೆ. ಕರಿಬಸಣ್ಣ, ಕ.ಸಾ.ಪ ಹೊಸಹಳ್ಳಿ ಹೋಬಳಿ ಘಟಕದ ಗೌರವ ಕೋಶಾಧ್ಯಕ್ಷರಾದ ಎಸ್. ರಾಮಕೃಷ್ಣ, ಹೆಚ್. ಜಿ. ಪ್ರಕಾಶ್ ಗೌಡ್ರು, ಶರಣನ ಗೌಡ್ರು, ಕೆ.ಎಸ್. ವೀರೇಶ್ ಇತರರು ಉಪಸ್ಥಿತರಿದ್ದರು.