18.3 C
New York
Wednesday, November 6, 2024

ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಶಾಲೆಯ ಕನ್ನಡ ಭಾಷೆ ಶಿಕ್ಷಕರಾದ ನಿಜಗುಣಪ್ಪನವರು ಭುವನೇಶ್ವರಿ ಫೋಟೋಕ್ಕೆ ಪುಷ್ಪಾರ್ಚನೆ ಮಾಡಿ
ಕನ್ನಡ ರಾಜ್ಯೋತ್ಸವ ಎಂಬುವುದು ಪ್ರತಿಯೊಬ್ಬ ಕನ್ನಡಿಗನ ಮನೆಯ ಹಬ್ಬ ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ಅಭಿಮಾನವೆಂಬುದು ರಕ್ತಗತವಾಗಿದೆ. ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸೋಣ ಆದರೆ ನಮ್ಮ ಭಾಷೆಯಲ್ಲಿಯೇ ಜೀವಿಸೋಣ ಎಂದು ಪ್ರಾಸ್ತಾವಿಕ ನುಡಿಗಳನ್ನಡಿದರು.

ಶಾಲೆಯ ಮುಖ್ಯ ಗುರುಗಳಾದ ವೈ ಎಂ ಈಶಪ್ಪ ಅವರು ಭುವನೇಶ್ವರಿ ಫೋಟೋ ಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ಮಾಡಿ ಕಾರ್ಯಕ್ರಮವನ್ನು ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಕರ್ನಾಟಕ ಸುಂದರ ರಾಜ್ಯ. ಇಲ್ಲಿ ಕನ್ನಡಿಗರು ಎಲ್ಲ ಭಾಷೆಯ ಜನರಿಗೂ ಸೌಹಾರ್ದತೆಯಿಂದ ಬಾಳಲು ಅವಕಾಶ ಕಲ್ಪಿಸಿದ್ದಾರೆ ಮೈಸೂರು ರಾಜ್ಯವು (ಈಗಿನ ಕರ್ನಾಟಕ ) 1956ರ ನವೆಂಬರ್‌ 1ರಂದು ನಿರ್ಮಾಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಹಾಗೂ ಮದ್ರಾಸ್‌ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ವಿಲೀನಗೊಲೀಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು
ನಮ್ಮ ಭಾಷಾಭಿಮಾನ ರಾಜ್ಯೋತ್ಸವದ ದಿನಗಳಲ್ಲಿ ಮಾತ್ರ ಇರಬಾರದು, ಅದು ನಮ್ಮ ಜೀವನದುದ್ದಕ್ಕೂ ಇರಬೇಕು ಎಂದರು. ಕನ್ನಡದ ಉಳಿವಿಗಾಗಿ ಹಲವಾರು ಸಾಹಿತಿಗಳು ಶ್ರಮಿಸಿದ್ದಾರೆ ಎಂದು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಗುರುಗಳಾದ ವೈ ಎಂ ಈಶಪ್ಪ. ಶ್ರೀಮತಿ ಕರಿಬಸಮ್ಮ. ಎಸ್ ಡಿ ಎಂ ಸಿ ಅಧ್ಯಕ್ಷ. ರುಕ್ಮಣಿ ಬಾಯಿ. ಭೈರವ ಶೆಟ್ಟಿ. ಸುದರ್ಶನ್. ನಿಜಗುಣಪ್ಪ. ಸಿದ್ದೇಶ್. ರಾಘವೇಂದ್ರ. ಮಾರೇಶ್. ಸಿದ್ದಯ್ಯ ಸ್ವಾಮಿ. ಬಸವರಾಜ್. ಶಾಲೆ ಸಿಬ್ಬಂದಿ ಹಾಗೂ ಎಸ್ ಡಿ.ಎಂ.ಸಿ ಸರ್ವ ಸದಸ್ಯರು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles