ಕೂಡ್ಲಿಗಿ ತಾಲೂಕು ಆಡಳಿತ. ಹಾಗೂ ತಾಲೂಕು ಪಂಚಾಯಿತಿ ಕೂಡ್ಲಿಗಿ
ವತಿಯಿಂದ ಹಮ್ಮಿಕೊಂಡಿದ್ದ ಈಶಾನ್ಯ ಪದವೀಧರ ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಚುನಾವಣೆಗೆ ಹೊಸದಾಗಿ ಹೆಸರನ್ನು ನೋಂದಾಯಿಸುವದು ಕಡ್ಡಾಯವಾಗಿರುತ್ತದೆ. ಆದ್ದರಿಂದ ತಾವುಗಳು ಕೆಲ ದಾಖಲೆ ಝರಾಕ್ಸ್ ಪ್ರತಿಗಳೊಂದಿಗೆ ಸ್ವಯಂ ಸಹಿ ಹಾಗೂ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಫಾರ್ಮ್ ನಂಬರ್ 18 ನ್ನು ಭರ್ತಿ ಮಾಡಿ, ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್ ಕಾರ್ಯಾಲಯದ ಚುನಾವಣಾ ವಿಭಾಗದಲ್ಲಿ ಸಲ್ಲಿಸಬೇಕು ಎಂದು ಹೇಳಿದರು.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ 18 ರ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ರಿಂದ ನವೆಂಬರ್ 06 ರವರಗೆ ಕಾಲಾವಕಾಶವಿದೆ. ಸೇರಿಸಲು ಬೇಕಾದ ದಾಖಲೆಗಳ ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್ , ಡಿಗ್ರಿ ಕಾನ್ವೊಕೇಶನ್ ಪ್ರಮಾಣಪತ್ರ, ಪದವಿ ಅಂಕಪಟ್ಟಿಗಳು (ನವೆಂಬರ್ 2020 ರೊಳಗೆ ಪದವಿ ಮುಗಿದಿರಬೇಕು) ಎರಡು ಭಾವಚಿತ್ರಗಳು ಸಲ್ಲಿಸಬೇಕಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಪದ್ಮನಾಭ ಕರ್ಣಂ.. ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗದವರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.