ಬಳ್ಳಾರಿ : ಕರ್ನಾಟಕ ಕ್ರಿಯಾಶೀಲಾ ಪದವೀಧರರ ವೇದಿಕೆಯ ವತಿಯಿಂದ ಈಶಾನ್ಯ ಪದವೀಧರರ ಕ್ಷೇತ್ರದ ಮತದರರ ನೋಂದಣಿಯು ಏಳು ಜಿಲ್ಲೆಯಲ್ಲಿ ಅತ್ಯಂತ ನಿಧಾನಗತಿಯವಾಗಿರುತ್ತದೆ. ಇದರಿಂದ ಪದವೀಧರರ ಮತದಾನ ನೋಂದಣಿಗೆ ದಿನಾಂಕ 06/11/2023 ರಂದು ಕೊನೆಯ ದಿನಾಂಕವಾಗಿದ್ದು , ಇದರಿಂದ ಪದವೀಧರಿಗೆ ಅಂತಕ ಉಂಟಾಗಿರುತ್ತದೆ.
ಅದರಿಂದ ಇನ್ನೂ ಹೆಚ್ಚಿನ ಪದವೀಧರರ ಮತದಾನದಲ್ಲಿ ನೋಂದಣಿ ಮಾಡಿಕೊಳ್ಳಲು ದಿನಾಂಕವನ್ನು ವಿಸ್ತರಣೆ ಮಾಡುವುದರಿಂದ ಹೆಚ್ಚಿನ ಪದವೀಧರರು ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅಂದರಿಂದ ತಾವುಗಳು ದಯವಿಟ್ಟು ನೋಂದಣಿ ಪ್ರಕ್ರಿಯೆ ದಿನಾಂಕವನ್ನು ಮೂಂದೂಡಬೇಕೆಂದು ಕರ್ನಾಟಕ ಕ್ರಿಯಾಶೀಲಾ ಪದವೀಧರರ ವೇದಿಕೆಯ ಅಪರ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ಮನವಿ ಮಾಡಿದರು.
ಇದೇ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ.ಡಿ. ರಂಗಯ್ಯ , ಕಾರ್ಯಧ್ಯಕ್ಷರಾದ ಶ್ರೀ .ಲಕ್ಷ್ಮಣ.ಎಸ್ ಭಂಡಾರಿ , ಸಂಘಟನೆ ಕಾರ್ಯದರ್ಶಿಯಾದ ಶ್ರೀ. ಶಂಕರ್ , ಕಾನೂನು ಸಲಹೆಗಾರಾದ ಶ್ರೀ.ಡಾ.ರಾಜು , ಸದಸ್ಯರುಗಳಾದ ಶ್ರೀ ಡಿ.ರಮಯ್ಯ , ಘನಮಲ್ಲಿ.ಎಮ್ ಇನ್ನೂ ಹಲವಾರು ಸದಸ್ಯರುಗಳು ಉಪಸ್ಥಿತರಿದ್ದರು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಂಕರ ಬಂಡೆ ಮಲ್ಲಿಕಾರ್ಜುನ ಪತ್ರಿಕಾ ಪ್ರಕಟಣೆ ತಿಳಿಸಿದರು.