ಕೂಡ್ಲಿಗಿ: ವಿದ್ಯುತ್ ತಂತಿ ತಗುಲಿ ಟ್ಯಾಕ್ಟರ್‌ನಲ್ಲಿದ್ದ ಅಪಾರ ಪ್ರಮಾಣದ ಮೆಕ್ಕೆಜೋಳದ ಒಣ ಮೇವು ಬೆಂಕಿಗಾಹುತಿಯಾದ ದುರ್ಘಟನೆ ತಾಲೂಕಿನ ಸಿದ್ದಾಪುರ ಗೊಲ್ಲರಹಟ್ಟಿಯ ರಸ್ತೆಯಲ್ಲಿ ಶನಿವಾರ ಸಂಜೆ ಜರುಗಿದೆ. ಸಂಡೂರು ತಾಲೂಕು ಡಿ ಮಲಾಪುರ ಗ್ರಾಮದಿಂದ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗೊಲ್ಲರಟ್ಟಿಗೆ ಬರುವ ರಸ್ತೆಯಲ್ಲಿ ಆಕಸ್ಮಿಕ ವಿದ್ಯುತ್ ತಂತಿ ತಗುಲಿ 15 ಸಾವಿರಕ್ಕೆ ಬೆಲೆ ಬಾಳುವ ಮೆಕ್ಕೆಜೋಳದ ಸೊಪ್ಪೆ ಉರಿದು ಸುಟ್ಟು ಭಸ್ಮವಾಗಿದೆ. ಸಿದ್ದಾಪುರ ವಡ್ಡರಹಟ್ಟಿ ಹನುಮಂತಪ್ಪ ಪಿ.ಆರ್ ತಂದೆ ವೀರಪ್ಪ ಪಿ.ಆರ್ ಎಂಬುವರಿಗೆ ಸೇರಿದ ಟ್ರಾಕ್ಟರ್ನಲ್ಲಿದ್ದ ಮೇವು ಸಂಪೂರ್ಣ ಭಸ್ಮವಾಗಿದ್ದು, ಟ್ರಾಲಿಯಲ್ಲಿದ್ದ ಮೆಕ್ಕೆಜೋಳದ ಮೇವು ಲಿಫ್ಟ್ ಮಾಡಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಇನ್ನು ಕಾನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರಗಿದೆ.ಮ ಗ್ರಾಮದ ನಾನಾ ಕಡೆ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇದರಿಂದಾಗಿ ಭಯದಲ್ಲಿ ಸಂಚಾರ ಮಾಡುವಂತಾಗಿದೆ, ರಸ್ತೆಯ ಮೇಲೆ ನೆಟಕ್ಕುವ ಹಾಯ್ದು ಹೋಗಿರುವ ಪರಿಣಾಮ ರೈತರ ಎತ್ತಿನ ಬಂಡಿಗಳು, ಇತರೆ ವಾಹನಗಳು ರಸ್ತೆಯಲ್ಲಿ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಮಾರ್ಗಗಳನ್ನು ಜೆಸ್ಕಾಂ ಅಧಿಕಾರಿಗಳು ಬದಲಾಯಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು, ರೈತರು ಆಗ್ರಹಿಸಿದ್ದಾರೆ.