ಕೂಡ್ಲಿಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕುಮಟ್ಟ ಪ್ರಗತಿ ಪರಿಶೀಲನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು, ಪ್ರಗತಿ ಪರಿಶೀಲನ ಸಭೆಗೆ ತಾಲೂಕಿನ ಇಲಾಖೆವಾರು ಎಲ್ಲಾ ಅಧಿಕಾರಿಗಳು ಪ್ರಗತಿ ಪರಿಶೀಲನ ಸಭೆಗೆ ಹಾಜರಾಗಿದ್ದರು ಪ್ರಗತಿಪರಶೀಲನ ಸಭೆ ಆರಂಭ ಮಾಡುವುದರ ಮುಂಚೆ. ಶಾಸಕರು ಎಲ್ಲಾ ಅಧಿಕಾರಿಗಳಿಗೆ ನಾನು ಈ ಕ್ಷೇತ್ರದ ಶಾಸಕನಾಗಿ ಬಂದ ಮೇಲೆ ಅಧಿಕಾರಿಗಳು ನನಗೆ ಸಲಹೆ ನೀಡುವುದರೋಡಿಗೆ ನನ್ನ ಜೊತೆಗೆ ನೀವು ಕೂಡ ಬಹಳ ಶ್ರಮವಾಯಿಸಿ ನಮ್ಮ ಮಾತು ಮಿರದೇ ಕೆಲಸ ಮಾಡಿ ತೋರಿಸಿದ್ದೀರಿ ಈ ನಿಮ್ಮ ಸಲಹೆ ಸಹಕಾರ ಕೂಡ ಸದಾ ನನಗೆ ಹೀಗೆ ಇರಬೇಕೆಂದು ಎಲ್ಲಾ ಅಧಿಕಾರಿಗಳಿಗೂ ಧನ್ಯವಾದಗಳು ತಿಳಿಸಿದರು. ಪ್ರಗತಿ ಪರಿಶೀಲನ ಸಭೆಯಲ್ಲಿ ಮುಖ್ಯವಾಗಿ ಈಗ ಸದ್ಯದ ಪರಿಸ್ಥಿತಿಯಲ್ಲಿ ಕೃಷಿ, ವಿದ್ಯುತ್, ಕುಡಿಯುವ ನೀರು ಗ್ರಾಮ ಪಂಚಾಯಿತಿ ಈ ಮೂರು ಇಲಾಖೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು. ಈ ಮೂರು ಇಲಾಖೆಗಳ ಬಗ್ಗೆ ನಮಗೆ ತುಂಬಾ ಜವಾಬ್ದಾರಿ ಇಲಾಖೆ ಅಧಿಕಾರಿಗಳು ತುಂಬಾನೇ ಶ್ರಮವಹಿಸಬೇಕು. ನಿಮ್ಮ ಜೊತೆಗೆ ಸದಾ ನಾನು ಇರುತ್ತೇನೆ. ಈ ಬರಗಾಲ ಆವರಿಸಿದ್ದರಿಂದ ನಮ್ಮ ತಾಲೂಕು ಬರಗಾಲ ಘೋಷಣೆ ಆಯಿತು ಕೃಷಿ ಇಲಾಖೆ ಅಧಿಕಾರಿಗಳು ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಮತ್ತು ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳು ಯಾವ ರೀತಿ ನೀವುಗಳು ಯೋಜನೆಯನ್ನು ಮಾಡಿಕೊಂಡಿದ್ದೀರಿ ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ಶಾಸಕರು ವಿಚಾರಿಸಿದಾಗ ಕೃಷಿ ಇಲಾಖೆ ಅಧಿಕಾರಿ ಸುನೀಲ್ ಮಾತನಾಡಿ ಕೂಡ್ಲಿಗಿ ತಾಲೂಕಿನಲ್ಲಿ 70,000 ಸಾವಿರ ಪಹಣಿಗಳು ಇವೆ ಈಗಾಗಲೇ ರೈತರು 40ಸಾವಿರ ಪಹಣಿ ಇರುವ ರೈತ ಪಲಾನುಭವಿಗಳು ಎಫ್ ಐ ಡಿ ನೋಂದಣಿ ರೈತರು ಮಾಡಿಸಿಕೊಂಡಿದ್ದಾರೆ. ಇನ್ನು ಕೆಲವು ರೈತರು ಮಾಡಿಸುತ್ತಾರೆ ಜಂಟಿ ಪಹಣಿ ಇರುವವರು ಕೂಡ ನಮ್ಮ ಕಚೇರಿಗೆ ಬಂದು ಎಫ್ ಐ ಡಿ ಮಾಡಿಸುವುದಕ್ಕೆ ಕೇಳುತ್ತಾರೆ ಜಂಟಿ ಪಹಣಿ ಇದ್ದರೆ ಬರುವುದಿಲ್ಲ ಈಗ ಮೊನ್ನೆ ಸ್ವಲ್ಪ ಮಳೆಯಾಗಿದೆ ಆದರೆ ನಮ್ಮಲ್ಲಿ ಇರೇ ಭೂಮಿ ಯಾವುದು ಇಲ್ಲ ಎರೆಭೂಮಿ ಇದ್ದರೆ ಕಡಲೇ ಬಿತ್ತನೆ ಮಾಡಬಹುದಿತ್ತು ಎಂದು ತಿಳಿಸಿದರು.
ಕುಡಿಯುವ ನೀರಿನ ಇಲಾಖೆ ಅಧಿಕಾರಿಯಾಗಿ ಪ್ರಸನ್ನ ಕುಮಾರ್ ತಾಲೂಕಿನಲ್ಲಿ ಈಗಾಗಲೇ ಕೆಲವೊಂದು ಹಳ್ಳಿಗಳಲ್ಲಿ ನೀರಿನ ಕೊರತೆ ಇತ್ತು ಹಳ್ಳಿಗಳಲ್ಲಿ ಹೊಸ ಬೋರ್ ವೆಲ್ ಕೊರಿಸಲಾಗಿದೆ ಎಂದು ಶಾಸಕರಿಗೆ ತಿಳಿಸಿದರು. ಕುಡಿಯುವ ನೀರಿನ ಇಲಾಖೆ ಅಧಿಕಾರಿ ಪ್ರಸನ್ ಕುಮಾರ್ ಗೆ ಶಾಸಕರು. ಶುದ್ಧ ಕುಡಿಯುವ ನೀರಿನ ಘಟಕಗಳು ಹಳ್ಳಿಗಳಲ್ಲಿ ಕೆಟ್ಟು ಹೋಗಿದ್ದಾವೆ ಹಾಗೂ ಜಲ ಜೀವನ್ ಮಿಷನ್ ಯೋಜನ ಬಗ್ಗೆ ಅಧಿಕಾರಿ ನೀವು ತಾಲೂಕಿನಲ್ಲಿ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಹಳ್ಳಿಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಜಲಜೀವನ್ ಯೋಜನೆ ಮತ್ತು ಹಳೆ ಓವರ್ ಟ್ಯಾಂಕ್ಗೆ ಬಣ್ಣ ಬಳಿದಿರುವ ವಿಷಯ ಕೂಡ ಈಗ ಮಾಧ್ಯಮದವರು ಪ್ರಸ್ತಾಪಿಸಿದ್ದಾರೆ. ಆದ್ದರಿಂದ ನೀವು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರಿಪಡಿಸಬೇಕೆಂದು ಶಾಸಕರು ತರಾಟೆಗೆ ತೆಗೆದುಕೊಂಡರು. ಇನ್ನು ಈ ಬಾರಿ ಪ್ರಗತಿ ಪರಿಶೀಲ ಸಭೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಾಗಿದ್ದರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕು ನಾನು ಕೂಡ ನಿಮ್ಮ ಜೊತೆಗೆ ಇರುತ್ತೇನೆ ನಿಮಗೆ ಏನು ಸಮಸ್ಯೆ ಬಂದರೂ ನಿಮ್ಮ ಜೊತೆಗೆ ನಾನು ಇರುತ್ತೇನೆ ನೀವು ಹಳ್ಳಿಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಕುಡಿಯುವ ನೀರು ಸ್ವಚ್ಛತೆ ಬಗ್ಗೆ ತುಂಬಾ ಕಾಳಜಿ ವಹಿಸಿ ಮತ್ತು ಜನರು ಗೂಳೆ ಹೋಗದಂತೆ ಜನರಿಗೆ ಉದ್ಯೋಗ ಖಾತರಿ ಕೆಲಸ ಕೊಡಿ ನಾನು ಪ್ರತಿ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಸಿ ನೆಟ್ಟುವ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭ ಮಾಡುತ್ತೇನೆ ಎಂದು ತಿಳಿಸಿದರು. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ದಾಳಿಯ ಬಗ್ಗೆ ಶಾಸಕರು ಪ್ರಸ್ತಾಪಿಸಿದಾಗ. ವಲಯ ಅರಣ್ಯ ಅಧಿಕಾರಿ. ಮಂಜುನಾಥ್ ಮತ್ತು ಸಂದೀಪ್ ನಾಯಕ್. ಕೂಡ್ಲಿಗಿ ಭಾಗ ಹಾಗೂ ಭೀಮಸಮುದ್ರ ಈ ಭಾಗದಲ್ಲಿ ಕರಡಿಗಳು ಹೆಚ್ಚು ದಾಳಿ ಮಾಡುತ್ತವೆ. ನಮ್ಮ ಇಲಾಖೆಯಿಂದ ಕೂಡ ಈಗಾಗಲೇ ಗಸ್ತು ಸಿಬ್ಬಂದಿಯನ್ನು ಹಾಕಿದ್ದೇವೆ. ಬರಗಾಲ ಹಾಗಿದ್ದರಿಂದ ಕರಡಿಗಳಿಗೆ ಅರಣ್ಯದಲ್ಲಿ ಯಾವುದೇ ಹಣ್ಣು ಹಂಪಲ್ಲ ಸಿಗುತ್ತಿಲ್ಲ. ಪ್ರತಿ ವರ್ಷ ಸೀತಾಫಲ ಉತ್ತಮ ಇಳುವರಿ ಬರುತ್ತಿತ್ತು. ಅರಣ್ಯದಲ್ಲಿ ಕರಡಿಗಳು ಪ್ರಾಣಿ ಪಕ್ಷಿಗಳಿಗೆ ಸಾಕಷ್ಟು ಸೀತಾಫಲ ಹಣ್ಣು ಸಿಗುತ್ತಿತ್ತು ಈ ಬಾರಿ ಎಲ್ಲಿ ಸಿಗುತ್ತಿಲ್ಲ ಈಗಾಗಲೇ ನಾವು ಕುಡಿಯುವ ನೀರಿನ ವ್ಯವಸ್ಥೆ ಅರಣ್ಯದಲ್ಲಿ ಮಾಡಿದ್ದೇವೆ. ಹೋಗಳಿಗೆ ಆಹಾರಕ್ಕಾಗಿ ಸರ್ಕಾರದಿಂದ ನಮ್ಮ ಇಲಾಖೆಗೆ ಯಾವುದೇ ಅನುದಾನ ಬರುವುದಿಲ್ಲ. ಈ ರಾತ್ರಿ ಸಮಯದಲ್ಲಿ ದಾಳಿ ಮಾಡುವ ಕರಡಿಗಳನ್ನು ಕಂಟ್ರೋಲ್ ಮಾಡುವುದು ತುಂಬಾ ಕಷ್ಟ. ಬೆಳಿಗ್ಗೆ ಸಮಯದಲ್ಲಿ ಬಾವಿ ಅಥವಾ ಮನೆ ಒಳಗಡೆ ಸೇರಿಕೊಂಡರೆ ಅದನ್ನು ಹಿಡಿಯಬಹುದು ವಲಯ ಅರಣ್ಯ ಅಧಿಕಾರಿ ಸಂದೀಪ್ ನಾಯಕ ತಿಳಿಸಿದರು. ಇನ್ನು ಅಧಿಕಾರಿಗಳಿಗೆ ಶಾಸಕರು ಗ್ಯಾರೆಂಟಿ ಯೋಜನೆ ಬಗ್ಗೆ ಯಾರು ತಪ್ಪು ಸಂದೇಶ ಕೊಡಬೇಡಿ ಗ್ಯಾರೆಂಟಿ ಯೋಜನೆಯಿಂದ ಹಣ ಇಲ್ಲ ಹಾಗೆ ಹೀಗೆ ಅಂತ ಯಾರೂ ಕೂಡ ತಪ್ಪು ಸಂದೇಶ ಕೊಡಬೇಡಿ ನಮ್ಮ ಸರ್ಕಾರದಲ್ಲಿ ಸಾಕಷ್ಟು ಅನುದಾನ ಇದೆ ನನಗೆ ರಾಜ್ಯದ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಎಲ್ಲಾ ಮಂತ್ರಿಗಳು ನನಗೆ ತುಂಬಾ ಸಹಕಾರ ನೀಡುತ್ತಿದ್ದಾರೆ ಪ್ರತಿ ಒಂದು ಇಲಾಖೆಗೆ ಯಾವುದೇ ತೊಂದರೆ ಆಗದೆ ಅನುದಾನವನ್ನು ನಾನು ತರುತ್ತೇನೆ ನೀವುಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.