9.2 C
New York
Wednesday, November 13, 2024

ಭಾರತ ತಂಡ ವಿಶ್ವಕಪ್ ಗೆಲ್ಲಲು ವಿಶೇಷ ಪೂಜೆ

ಕೂಡ್ಲಿಗಿ: ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ ಆರ್.ಗ್ರೂಪ್ ಸಂಸ್ಥಾಪಕರಾದ ಯು ನಾಗೇಶ್ ಪಟ್ಟಣದ ಶ್ರೀ ಸಾಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಆರ್ ಗ್ರೂಪ್ ನ ಸಂಸ್ಥಾಪಕರಾದ ಯು ನಾಗೇಶ್ ಮಾತನಾಡಿ ಇಂದು ನಡೆಯಲಿರುವ ವಿಶ್ವಕಪ್ ನ ಮೊದಲನೇ ಸೆಮಿ ಫೈನಲ್ ಪಂದ್ಯಾವಳಿ ಭಾರತ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು. ಈ ಪಂದ್ಯಾವಳಿಯಲ್ಲಿ ಭಾರತ ತಂಡ ಜಯ ಸಾಧಿಸಲೆಂದು ಮತ್ತು ಈ ವಿಶ್ವಕಪ್ ನಲ್ಲಿ ಭಾರತ ತಂಡ ವಿಶ್ವಕಪ್ ವಿಜಯಶಾಲಿ ಆಗಲೆಂದು ಸಾಲೇಶ್ವರ ದೇವಸ್ಥಾನದಲ್ಲಿವಿಶೇಷ ಅಭಿಷೇಕ ಪೂಜಾ ಕೈಕಾರ್ಯ ನೆರವೇರಿಸಿದರು. ಹಿಂದಿನ ವಿಶ್ವಕಪ್ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ನಮ್ಮ ಭಾರತ ಪರಾಭವಗೊಂಡಿತ್ತು. ಆದರೆ, ಈ ಬಾರಿಗೆ ಹಾಗೆ ಆಗಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಅಪ್ ತುಂಬಾ ಚೆನ್ನಾಗಿರೋದ್ರಿಂದ ನೂರಕ್ಕೆ ನೂರಷ್ಟು ಭಾರತ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯರಾದ ಬಸವರಾಜ್ ಸಿದ್ದನಕೋಟೆ. ಯುವ ಮುಖಂಡರಾದ ಎ ಟಿ ಬಸವರಾಜ್, ಸಾಲೇಶ್, ಗಜೇಂದ್ರ ಆಚಾರಿ, ಯು ಎನ್ ಜೀವನ್, ಯುಎನ್ ಬಾಲಾಜಿ, ಅನಿಲ್ ಕುಮಾರ್ ಬಾಬು, ದೇವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles