ಬಳ್ಳಾರಿ : ಕರ್ನಾಟಕ 50 ರ ಸಂಭ್ರಮ ಜ್ಯೋತಿ ರಥಯಾತ್ರೆ ಅಂಗವಾಗಿ ಬಳ್ಳಾರಿಯ ಎಪಿಎಂಸಿ ವೃತ್ತದಲ್ಲಿ ಸೂರ್ಯ ಕಲಾ ಮತ್ತು ಸೇವಾ ಬಳಗದ ಮುಖ್ಯಸ್ಥರಾದ ಅಲಿವೇలు ಸುರೇಶ್ ಅವರ ನೇತೃತ್ವದಲ್ಲಿ ಕರ್ನಾಟಕ ಜನ ಸೈನ್ಯ ಅಧ್ಯಕ್ಷರಾದ ಎರಿಸ್ವಾಮಿಯವರ ಸಹಕಾರದೊಂದಿಗೆ ಎಪಿಎಂಸಿಯ
ಸ್ಥಳೀಯ ಮುಖಂಡರುಗಳಾದ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರುಗಳು ಶ್ರೀಯುತ ಬಿ. ಮಹಾರುದ್ರಗೌಡ ರವರ ಅಧ್ಯಕ್ಷತೆಯಲ್ಲಿ ಹಾಗೂ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷರಾದ ಚಿದಾನಂದಪ್ಪ ರವರು,ಪದಾಧಿಕಾರಿಗಳು ಎಪಿಎಂಸಿಯ ಕಾರ್ಯದರ್ಶಿಗಳು ಸಹ ಕಾರ್ಯದರ್ಶಿಗಳು ಮತ್ತು ಪೊಲೀಸ್ ಇಲಾಖೆಯ, ಸಹಕಾರದೊಂದಿಗೆ ಎ.ಪಿ.ಎಂ.ಸಿ ಆವರಣದಲ್ಲಿ ವಿಜೃಂಭಣೆಯಿಂದ ಜ್ಯೋತಿ ರಥಯಾತ್ರೆಯನ್ನು
ಬರಮಾಡಿಕೊಂಡು, ಭುವನೇಶ್ವರಿ ತಾಯಿಗೆ ಗೌರವ ಮಾಲಾರ್ಪಣೆ ಯೊಂದಿಗೆ ಗೌರವಿಸಿ ಎಪಿಎಂಸಿ ಅವರಣದಲ್ಲಿ ಮೆರವಣಿಗೆ ಮುಖಾಂತರ ಅದ್ದೂರಿಯಾಗಿ ಸ್ವಾಗತಿಸಲಾಯಿತು .
ಇದೇ ಸಂದರ್ಭದಲ್ಲಿ ಉಜ್ಜಯಿನಿ ಜಗದ್ಗುರು ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರವರು ಮತ್ತು ವಿದ್ಯಾರ್ಥಿಗಳು ಎಪಿಎಂಸಿಯ ಸ್ಥಳೀಯ ರೈತರು ಮತ್ತು ಹಮಾಲಿಗಳು ಮತ್ತು ಕನ್ನಡ ಪ್ರೇಮಿಗಳು ಅಭಿಮಾನಿಗಳು ಭಾಗವಹಿಸಿದ್ದರು