ಕಾನ ಹೊಸಹಳ್ಳಿ: ಸಮೀಪದ ಹೂಡೇಂ ಗ್ರಾಮದ ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ದಲ್ಲಿ ಗ್ರಂಥಾಲಯ ಸಪ್ತಹ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಚಂದ್ರಪ್ಪ ಅವರು ಚಾಲನೆ ನೀಡಿ ಮಾತನಾಡಿದರು. ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಂಥ ಪಾಲಕರಾದ ತುಡುಮ ಗುರುರಾಜ್ ಮಾತನಾಡಿ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿ ಗ್ರಂಥಾಲಯ ಸದ್ಬಳಿಕೆ ಬಗ್ಗೆ, ಮಕ್ಕಳ ಬಾಲ್ಯವನ್ನು ಆನಂದಿಸಿ ಬೆಳೆಯುತ್ತಾ ಸಾಗಿ ಎಂಬ ನುಡಿಮುತ್ತುಗಳನ್ನು ಹೇಳಿ ಈ ಗ್ರಂಥಾಲಯದ 6 ರಿಂದ 18 ವರ್ಷದ ಮಕ್ಕಳಿಗೆ ಉಚಿತವಾಗಿ ಸದಸ್ಯತ್ವವನ್ನು ಪಡೆಯಲು ತಿಳಿಸಿದರು. ಈ ವೇಳೆ ಗುರು ಕನಕ ಮುಖ್ಯ ಶಿಕ್ಷಕರು ಸುನಿತಾ ಮಾತನಾಡಿ ದಿನಾಲು ದಿನಪತ್ರಿಕೆ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಿ ಎಂದು ಮಕ್ಕಳಿಗೆ ತಿಳಿಸಿದರು. ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು ಮಕ್ಕಳಿಗೆ ಕೊನೆಯಲ್ಲಿ ಸಿಹಿ ಹಂಚುವ ಮೂಲಕ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಬಾಯಿ, ಕಾರ್ಯದರ್ಶಿ ತಿಪ್ಪೆರುದ್ರಪ್ಪ, ಹಿರಿಯ ಮುಖಂಡರಾದ ಜರುಗು ಬೋರೆಯ್ಯ, ಹಾಗೂ ಜಿಬಿ ಬೋಸಯ್ಯ, ಓಬಣ್ಣ, ಹಿರಿಯ ಓದುಗರಾದ ಬಿ ಪಾಪನಾಯಕ, ಪೂಜಾರಿ ಪಾಲಯ್ಯ, ಹಾಗೂ ಶ್ರೀ ಕಂಪಳರಂಗ ಪ್ರೌಢಶಾಲೆಯ ಶಿಕ್ಷಕರು ಲಲಿತಾ ಹಾಗೂ ಮಧುಶ್ರೀ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚೆಂದ್ರಪ್ಪ, ಶ್ರೀ ಗುರು ಕನಕ ವಿದ್ಯಾ ಕೇಂದ್ರದ ಮುಖ್ಯ ಗುರುಗಳಾದ ಸುನಿತಾ, ಸರೋಜಾ, ಸಹ ಶಿಕ್ಷಕರ ವೃಂದದವರು ಹಾಗೂ ಪುಟಾಣಿ ಮಕ್ಕಳು ಊರಿನ ಗಣ್ಯ ವ್ಯಕ್ತಿಗಳು ಗ್ರಂಥಾಲಯದ ಓದುಗರು ಈ ಸುಂದರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು .