ಬಳ್ಳಾರಿ : ನಗರದ ಮಹಮ್ಮದೀಯ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ನೆಡೆದ ಬಳ್ಳಾರಿ ಪಶ್ಚಿಮ ವಲಯ ಕುರುಗೋಡು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ
ಕಾರ್ಯಕ್ರಮದಲ್ಲಿ ಮಹಾನಂದಿ ಕೊಟ್ಟಂ ಡಾ.ಬಿ.ಆರ್ ಅಂಬೇಡ್ಕರ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (6ನೇ ತರಗತಿಯ) ವಿದ್ಯಾರ್ಥಿ ಅಜಯ್ ರವರು ಛದ್ಮವೇಷದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ವಿದ್ಯಾರ್ಥಿಗಳ ಈ ಸಾಧನೆಗೆ , ಮುಖ್ಯಗುರುಗಳಾದ ಶ್ರೀ ನಾಗರಾಜ್.ಹೆಚ್ ಶಿಕ್ಷಕಿಯಾರಾದ ಶ್ರೀಮತಿ ಸಿದ್ಧಲಿಂಗಮ್ಮ.ಎಲ್ , ಶ್ರೀಮತಿ ಎಮ್.ಪ್ರಮೀಳಾ ಬಾಯಿ , ಅತಿಥಿ ಶಿಕ್ಷಕಿಯಾದ ಶ್ರೀಮತಿ ಅನಿತ.ಹೆಚ್.ವೈ ಅಡುಗೆ ಸಹಾಯಕರಾದ ಶ್ರೀಮತಿ ಗೌರಮ್ಮ , ರುದ್ರಮ್ಮ , ನಗರದ
ಡಾ.ಬಿ.ಆರ್.ಅಂಬೇಡ್ಕರ್ ನಗರ ಸೇವಾ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು , ನಗರದ ಗುರು ಹಿರಿಯರು , ನಗರ ಮುಖಂಡರುಗಳು ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.