ಬಳ್ಳಾರಿ : ನಗರದ ದುರ್ಗಮ್ಮ ದೇವಸ್ಥಾನದ ವೃತ್ತ ಹತ್ತಿರ ರಸ್ತೆ ಕಾಮಗಾರಿ ನಡೆಯತ್ತಿರುವುದರಿಂದ ಕಾಮಗಾರಿ ಮುಗಿಯುವವರೆಗೆ, ಸಾರ್ವಜನಿಕರು ತಾತ್ಕಾಲಿಕವಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ಕೋರಿದ್ದಾರೆ.
ಮಾರ್ಗ ಬದಲಾವಣೆ ಮಾಹಿತಿ:
ಸಿರುಗುಪ್ಪ ರಸ್ತೆ, ಎಸ್.ಪಿ.ಸರ್ಕಲ್ ಮುಖಾಂತರ ಬಳ್ಳಾರಿ ನಗರಕ್ಕೆ ಪ್ರವೇಶಿಸುವ ಎಲ್ಲಾ ತರಹದ ಭಾರಿ ಸರಕು ವಾಹನಗಳು ಅಂಬೇಡ್ಕರ್ ಮೋತಿ ಸರ್ಕಲ್ ಮುಖಾಂತರ ಸಂಚರಿಸಬೇಕು. ಎಸ್.ಪಿ.ಸರ್ಕಲ್ ಮುಖಾಂತರ ನಗರದೊಳಗೆ ಪ್ರವೇಶಿಸುವ ಕಾರ್ ಹಾಗೂ ದ್ವಿ ಚಕ್ರ ವಾಹನಗಳು ತಾಳೂರು ರಸ್ತೆ, ಕೇನಾಲ್ ರಸ್ತೆ, ಕೆ.ಇ.ಬಿ ಸರ್ಕಲ್ ಮೂಲಕ ನಗರದೊಳಗೆ ಪ್ರವೇಶಿಸಬಹುದು.
ಮೋಕ ರಸ್ತೆಯ ಕಡೆಯಿಂದ ಬರುವ ಭಾರಿ ಸರಕು ವಾಹನಗಳು ಕೇವಲ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕೆ.ಇ.ಬಿ ಸರ್ಕಲ್, ಎಸ್.ಎನ್.ಪೇಟೆ ಫ್ಲೈಓವರ್, ಸಂಗಮ್ ಸರ್ಕಲ್, ರಾಯಲ್, ಮೋತಿ ಸರ್ಕಲ್ ಮುಖಾಂತರ ಸಿರುಗುಪ್ಪ ಮತ್ತು ಹೊಸಪೇಟೆ ರಸ್ತೆ ಕಡೆಗೆ ಸಂಚರಿಸಬೇಕು. ಮೋಕ ರಸ್ತೆಯ ಕಡೆಯಿಂದ ಬಳ್ಳಾರಿ ನಗರಕ್ಕೆ ಬರುವ ಎಲ್ಲಾ ಲಘು ವಾಹನ ಹಾಗೂ ಮೋಟಾರ್ ಸೈಕಲ್‍ಗಳು, ಕೆ.ಇ.ಬಿ ಸರ್ಕಲ್, ಗಾಂಧಿನಗರ ಮಾರ್ಕೆಟ್, ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜ್ ಮುಖಾಂತರ ನಗರದಲ್ಲಿ ಸಂಚರಿಸಬೇಕು.
ಅನಂತಪುರ ಕಡೆಯಿಂದ ದುರ್ಗಮ್ಮ ದೇವಸ್ಥಾನದ ಕ್ರಾಸ್ ಮೂಲಕ ಸಿರುಗುಪ್ಪಕ್ಕೆ ಹೋಗುವ ಬದಲಾಗಿ ಎಲ್ಲಾ ವಾಹನಗಳು, ರಾಯಲ್, ಮೋತಿ ಸರ್ಕಲ್, ಎಸ್.ಪಿ ಸರ್ಕಲ್ ಮುಖಾಂತರ ಸಂಚರಿಸಬೇಕು. ಬೆಂಗಳೂರು ಹಾಗೂ ಹೊಸಪೇಟೆ ಕಡೆಯಿಂದ ಮೋಕ ಕಡೆಗೆ ಸಂಚರಿಸುವ ಭಾರಿ ಸರಕು ವಾಹನಗಳು ಬೈ ಪಾಸ್ ರಸ್ತೆಯ ಮೂಲಕ ಮಾತ್ರ ಸಂಚರಿಸಬೇಕು.
ಹೊಸಪೇಟೆ ಹಾಗೂ ಬೆಂಗಳೂರು ಕಡೆಯಿಂದ ಮೋಕ ಕಡಗೆ ಹೋಗುವ ವಾಹನಗಳು ಮೋತಿ ಸರ್ಕಲ್, ರಾಯಲ್ ಸರ್ಕಲ್, ಸಂಗಮ ಸರ್ಕಲ್ ಮೂಲಕ ಮೋಕ ಹಾಗೂ ಅನಂತಪುರ ರಸ್ತೆ ಕಡೆಗೆ ಹಾಗೂ ಬೆಂಗಳೂರು ರಸ್ತೆಯ ಕಡೆಯಿಂದ ಸಿರುಗುಪ್ಪ ರಸ್ತೆಯ ಕಡೆಗೆ ಹೋಗುವ ವಾಹನಗಳು ಮೋತಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಎಸ್.ಪಿ ಸರ್ಕಲ್ ಮುಖಾಂತರ ಸಂಚರಿಸಬೇಕು.
ಬಳ್ಳಾರಿ ನಗರದ ರಾಯಲ್ ಸರ್ಕಲ್ ಹಳೇ ಬಸ್ ನಿಲ್ದಾಣದ ಮುಖಾಂತರ ಮೋಕ ಕಡೆಗೆ ಸಂಚರಿಸುವ ವಾಹನಗಳು ಹಳೆ ಕೋರ್ಟ್ ಮುಂಭಾಗದ ರಸ್ತೆ ಮೂಲಕ ಸಂಚರಿಸಬೇಕು. ರಾಯಲ್ ಹಳೆ ಬಸ್ ನಿಲ್ದಾಣದಿಂದ ಸಿರುಗುಪ್ಪ ರಸ್ತೆ ಕಡೆಗೆ ಸಂಚರಿಸುವ ಲಘು ಮೋಟಾರ್ ವಾಹನ ಹಾಗೂ ದ್ವಿ ಚಕ್ರ ವಾಹನಗಳು, ಎಸ್.ಪಿ ಕಚೇರಿಯ ಮುಂದಿನ ರಸ್ತೆ ಜೈಲ್ ರಸ್ತೆಯ ಮೂಲಕ ಸಂಚರಿಸಬೇಕು.
ಮೋಕ ಕಡೆಯಿಂದ ಬಳ್ಳಾರಿ ನಗರಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಕೆ.ಇ.ಬಿ ಸರ್ಕಲ್, ಎಸ್.ಎನ್.ಪೇಟೆ ಫ್ಲೈಓವರ್, ಕೂಲ್ ಕಾರ್ನರ್ ಸರ್ಕಲ್, ಇಂದಿರಾ ಸರ್ಕಲ್, ರಾಯಲ್ ಸರ್ಕಲ್ ಮುಖಾಂತರ ಹಳೆ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಬಳ್ಳಾರಿ ನಗರದಿಂದ ಮೋಕ ರಸ್ತೆಯ ಕಡೆಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಹಳೆ ಬಸ್ ನಿಲ್ದಾಣ, ಯು.ಬಿ ಸರ್ಕಲ್, ಕೂಲ್ ಕಾರ್ನರ್ ಸರ್ಕಲ್, ಎಸ್.ಎನ್.ಪೇಟೆ ಫ್ಲೈಓವರ್, ಕೆ.ಇ.ಬಿ ಸರ್ಕಲ್ ಮುಖಾಂತರ ಸಂಚರಿಸಬೇಕು.
ಸಿರುಗುಪ್ಪ ಕಡೆಯಿಂದ ಬಳ್ಳಾರಿ ನಗರಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಎಸ್.ಪಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಮೋತಿ ಸರ್ಕಲ್, ರಾಯಲ್ ಸರ್ಕಲ್ ಮುಖಾಂತರ ಹಳೆ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಬಳ್ಳಾರಿ ನಗರದಿಂದ ಸಿರುಗುಪ್ಪ ರಸ್ತೆಯ ಕಡೆಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಹಳೆ ಬಸ್ ನಿಲ್ದಾಣ, ಯು.ಬಿ ಸರ್ಕಲ್, ಕೂಲ್ ಕಾರ್ನರ್ ಸರ್ಕಲ್, ಇಂದಿರಾ ಸರ್ಕಲ್, ರಾಯಲ್ ಸರ್ಕಲ್, ಮೋತಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಎಸ್.ಪಿ ಸರ್ಕಲ್ ಮುಖಾಂತರ ಸಂಚರಿಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಎಸ್‍ಪಿ ರಂಜೀತ್ ಕುಮಾರ್ ಬಂಡಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.