ಹಿಪ್ಪುನೇರಳೆ ಸೊಪ್ಪಿಗೆ ಮುದುಡುವ ರೋಗ ಬಾಧಿಧೆಗಳಿಗೆ ಸಿಲುಕಿ ತತ್ತರಿಸಿದ್ದ ರೈತರು
ಕೂಡ್ಲಿಗಿ : ಬಯಲುಸೀಮೆ ರೈತರ ಜೀವನೋಪಾಯಕ್ಕೆ ಸಂಜೀವಿನಿಯಾಗಿರುವ ರೇಷ್ಮೆ ಬೆಳೆ ತಾಲೂಕಿನಲ್ಲಿ ನಾನಾ ರೋಗ ಬಾಧಿಧೆಗಳಿಗೆ ಸಿಲುಕಿ ತತ್ತರಿಸಿದೆ. ಹಿಪ್ಪುನೇರಳೆ ಸೊಪ್ಪಿ ಗಂಟಿದ ಮಾರಕ ನುಸಿ, ಎಲೆಸುರುಳಿ ರೋಗ ಹಾಗೂ ಮುದುಡುವ (ಕುಡಿ ಅರಿಶಿಣ ಬಣ್ಣಕ್ಕೆ ತಿರುಗುತ್ತದೆ) ಈ ರೋಗಕ್ಕೆ ರೇಷ್ಮೆ ಬೆಳೆಗಾರರು ನಲುಗಿ ಹೋಗಿದ್ದಾರೆ. ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯ ಗಂಡ ಬೊಮ್ಮನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಜನರ ಮುಖ್ಯ ಕಸುಬು ರೇಷ್ಮೆ ಸಾಕಾಣಿಕೆ ಕೃಷಿಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ತಾಲೂಕಿನಲ್ಲಿ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲಿ 800 ರೈತರು ರೇಷ್ಮೆ ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಾರೆ. ಈ ಭಾಗದ ರೈತರು ತಮ್ಮ ದೈನಂದಿನ ಜೀವನೋಪಾಯಕ್ಕಾಗಿ ರೇಷ್ಮೆ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ರೇಷ್ಮೆಬೆಳೆಗೆ ಮುಂಗಾರು ಮಳೆ ವೈಫಲ್ಯದ ಎಫೆಕ್ಟ್ ಇಂದ ಸ್ವಾಭಾವಿಕವಾಗಿ ವಾತವಾರಣದಲ್ಲಿ ತೇವಾಂಶ ಕೊರತೆ ಕಾಡುತ್ತಿದೆ. ಇದರ ಪರಿಣಾಮ ರೇಷ್ಮೆ ತೋಟಗಳ ಮೇಲೆ ಆಗುತ್ತಿದೆ ಎನ್ನುವುದು ರೈತರ ಮಾತು. ಸದ್ಯ ಹಿಪ್ಪುನೇರಳೆ ತೋಟಗಳಲ್ಲಿ ಸೊಪ್ಪಿನ ಚಿಗುರನ್ನು (ಕುಡಿ) ಕೀಟಗಳು ತಿನ್ನುತ್ತಿದ್ದು, ಎಲೆಗಳು ಮುದುಡಿಹೋಗಿ ಸತ್ವಹೀನವಾಗುತ್ತಿದೆ.
ವಿವಿಧ ತಾಲೂಕಿಗೆ ರೇಷ್ಮೆ ಸೊಪ್ಪು ಸರಬರಾಜು: ಗಂಡ ಬೊಮ್ಮನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ರೇಷ್ಮೆಯ ಸೊಪ್ಪು ಅಕ್ಕ ಪಕ್ಕ ತಾಲೂಕುಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ರೇಷ್ಮೆ ಸೊಪ್ಪಿಗೆ ವಕ್ಕರಿಸಿದ ಅದೊಂದು ರೋಗ, ರೇಷ್ಮೆ ಸಾಕಾಣಿಕೆದಾರರನ್ನು ಸಂಕಷ್ಟಕ್ಕೆ ನೂಕಿದೆ. ಈ ಬಾರಿ ಬರಗಾಲದಿಂದ ಅನ್ನದಾತ ತತ್ತರಿಸಿದ್ದಾರೆ. ಆದರೆ, ರೇಷ್ಮೆ ಸಾಕಾಣಿಕೆಯಿಂದ ಬರುತಿದ್ದ ಅಲ್ಪಸ್ವಲ್ಪ ಆದಾಯದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ.
ಕಳೆದ ಬಾರಿ ಚೆನ್ನಾಗಿ ಬೆಳೆ ಬಂದಿತ್ತು, ಈ ಬಾರಿ ಹುಳ ಸಾಕಾಣಿಕೆ ಮಾಡುವಷ್ಟರಲ್ಲಿ ರೇಷ್ಮೆಗೆ ಕುಡಿ ರೋಗ ಕಾಣಿಸಿಕೊಳ್ಳುತ್ತದೆ. ಹಾಗ ರೈತರು ನೇರವಾಗಿ ರೇಷ್ಮೆ ಇಲಾಖೆ ಅಧಿಕಾರಿಗಳನ್ನು ರೇಷ್ಮೆ ಸಪ್ಪಿಗೆ ಈ ರೀತಿ ರೋಗ ಹರಡಿದೆ ಅಂತ ಹೇಳಿದ ಔಷಧಿ ಸಿಂಪಡಿಸುವುದಕ್ಕೆ ಹೇಳುತ್ತಾರೆ. ಔಷಧಿ ಸಿಂಪಡಿಸಿದರು ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ ಹೀಗಾಗಿ ರೇಷ್ಮೆ ಕೃಷಿ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ರೈತ ಬಸಣ್ಣಎಕ್ಕೆಗೊಂದಿ ಬೇಸರ ವ್ಯಕ್ತಪಡಿಸಿದ್ದಾರೆ.
:
ಕೊಯ್ಲಿಗೆ ಬಂದಿದ್ದ ರೇಷ್ಮೆ ಸೊಪ್ಪಿನಲ್ಲಿ ನುಸಿರೋಗದಿಂದ ತೋಟಗಳಲ್ಲಿ ಸರಿಯಾಗಿ ಸೊಪ್ಪು ಬರುತ್ತಿಲ್ಲ. ಹೀಗಾಗಿ ರೇಷ್ಮೆ ಕೃಷಿ ಮಾಡುವುದೇ ದೊಡ್ಡ ಸವಾಲಾಗಿದೆ. ಈ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ಸಹ ಸರಿಯಾಗಿ ಗೂಡು ಕಟ್ಟುವುದಿಲ್ಲ ಕೆಲವೊಂದು ಹುಳ ಸಾಯುತ್ತಿವೆ.
•ರೇಷ್ಮೆ ಬೆಳೆಗಾರ. ರೈತ ಬಸಣ್ಣ ಎಕ್ಕೆಗೊಂದಿ
:
ನುಸಿಪೀಡೆ ನಿಯಂತ್ರಣಕ್ಕಾಗಿ ರೇಷ್ಮೆ ಇಲಾಖೆಯಿಂದ ಪ್ರತಿ ಗ್ರಾಮದ ರೈತರ ಹೊಲದಲ್ಲಿ ರೈತರ ಗುಂಪು ಸಭೆ ನಡೆಸಿ ಜತೆಗೆ ರೋಗವನ್ನು ಸಮಗ್ರ ನಿಯಂತ್ರಣಕ್ಕಾಗಿ ಶಿಫಾರಸಿನಂತೆ ಕಟ್ಟುನಿಟ್ಟಾಗಿ ಕೀಟನಾಶಕ ಸಿಂಪಡಿಸುವ ಮೂಲಕ ನುಸಿಪೀಡೆ ಹಾವಳಿ ನಿಯಂತ್ರಿಸಲು ಸಲಹೆ ನೀಡಲಾಗುತ್ತಿದೆ.
•ಪ್ರಾಣೇಶ್, ಸಹಾಯಕ ನಿರ್ದೇಶಕ ರೇಷ್ಮೆ ಇಲಾಖೆ ಕೂಡ್ಲಿಗಿ