ಬಳ್ಳಾರಿ : ಸ್ತ್ರೀಯರ ಕಲಾ ನೈಪುಣ್ಯತೆ ಹಾಗೂ ಕಲ್ಪನಾಶಕ್ತಿಯ ಪ್ರತೀಕವೇ ರಂಗೋಲಿ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಶ್ರೀ ಕ್ಷೇತ್ರ ಚೇಳ್ಳಗುರ್ಕಿಯ ಪವಾಡ ಪುರುಷ ಸದ್ಗುರು ಶ್ರೀ ಎರ್ರಿತಾತನವರ ಮುತ್ತಿನ ಪಲ್ಲಕ್ಕಿ ಜಾತ್ರೆಯ ನಿಮಿತ್ತ ರಾಜ ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ನಗದು ಬಹುಮಾನ ವಿತರಿಸಿ ಮಾತನಾಡಿ ರಂಗೋಲಿ ಭಾರತ ದೇಶಾದ್ಯಂತ ಕಂಡುಬರುವ ಜಾನಪದ ಕಲೆಯಾಗಿದೆ.
ಸಿಂಧೂ ಬಯಲಿನ ನಾಗರಿಕತೆ ಕಾಲದಿಂದಲೂ ಆಚರಣೆಯಲ್ಲಿದೆ.ರಂಗ ಎಂದರೆ ಕೃಷ್ಣ ಎಂದರ್ಥ. ವಿಘ್ನಗಳು ನಿವಾರಣೆಗೆ ಇದನ್ನು ಬಳಸಲಾಗುತ್ತದೆ.
ರಂಗೋಲಿ ಸೂರ್ಯ ಉದಯಿಸುವ ಮುಂಚಿತವಾಗಿ ಹಾಕಬೇಕು. ಇದನ್ನು ಯಜ್ಞ, ಯಾಗ, ಹಬ್ಬ, ಹರಿದಿನ,ಜಾತ್ರೆ ಸಂದರ್ಭದಲ್ಲಿ ಮನೆಯಂಗಳದಲ್ಲಿ ಹಾಗೂ ದೇವಸ್ಥಾನಗಳ ಮುಂದೆ ಚಿತ್ತಚಿತ್ತಾರವಾಗಿ ಹಾಕಿ, ದೇವರಲ್ಲಿ ತನಗೆ ಇಷ್ಟವಾದುದನ್ನು ಬೇಡಿಕೊಂಡು ಆನಂದಿಸುತ್ತಾರೆ.
ರಂಗೋಲಿ ಸ್ಪರ್ಧೆ ಏರ್ಪಡಿಸುವುದರಿಂದ ಸುತ್ತಲಿನ ಪರಿಸರ ಸ್ವಚ್ಛ ಹಾಗೂ ಸುಂದರಗೊಳ್ಳುತ್ತದೆ.ಇದನ್ನು ಗುಜರಾತಿನಲ್ಲಿ ಸತಿಯಾ,ಆಂಧ್ರಪ್ರದೇಶದಲ್ಲಿ ಮುಗ್ಗು,ತಮಿಳುನಾಡುನಲ್ಲಿ ಕೋಲಂ ಎಂಬ ಹೆಸರುಗಳಿಂದ ಕರೆಯುತ್ತಾರೆ ಎಂದು ಹೇಳಿ,ಪರಿಸರ ಸ್ವಚ್ಛತೆಗೆ ಸದಾ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಪದವಿಧರ ವಿದ್ಯಾರ್ಥಿನಿ ಎಸ್. ಕೆ.ವಾಣಿ ಪ್ರಥಮ, ವನಜಾಕ್ಷಿ ದ್ವಿತೀಯ, ವಿನೂತ ತೃತೀಯ ಹಾಗೂ ಹಿಮಬಿಂದು ನಾಲ್ಕನೇ ಬಹುಮಾನಕ್ಕೆ ಆಯ್ಕೆಗೊಂಡವರು.ಇವರಿಗೆ ಕ್ರಮವಾಗಿ ರೂ.500,300,200,100 ನಗದು ಬಹುಮಾನ ಹಾಗೂ ಪದಕ ನೀಡಿ ಗೌರವಿಸಿ ಪ್ರೋತ್ಸಾಹ ನೀಡಲಾಯಿತು.
ಶಿಕ್ಷಕರಾದ ಕೆ.ರಾಮಾಂಜಿನೇಯ, ಲೋಕೇಶ್, ಶಿವರಾಜ್, ಲಕ್ಷ್ಮೀ, ರಾಘವೇಂದ್ರ ಹಾಗೂ ಊರಿನ ಗಂಗಾಧರ ಮುಂತಾದವರು ಉಪಸ್ಥಿತರಿದ್ದರು.