ಬಳ್ಳಾರಿ : ಮುಂಬರುವ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಅವರನ್ನು ನಮ್ಮ ಪಕ್ಷ ನೈತಿಕ ಬೆಂಬಲ ನೀಡಲಿದೆಂದು ಪಕ್ಷದ ರಾಜ್ಯ ಅಧ್ಯಕ್ಷ ಮುಖ್ಯ ಮಂತ್ರಿ ಚಂದ್ರ ಅವರು ಘೋಷಣೆ ಮಾಡಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಷಯ ಪ್ರಕಟಿಸಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ದೂರವಿದ್ದು.
ಪಾರದರ್ಶಕತೆಯಿಂದ ಇರಲು ಬಯಸುವ, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವ, ಉತ್ತಮ ಸಾಮಾಜಿಕವಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಾಪ್ ರೆಡ್ಡಿ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದು. ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ನಮ್ಮಪಕ್ಷದ ಕಾರ್ಯಕರ್ತರು ಅವರಿಗೆ ಸಾಥ್ ನೀಡಲಿದ್ದಾರೆ.
ನಮ್ಮ ಪಕ್ಷ ಉಚಿತವಾಗಿ ಕೊಡುವುದನ್ನು ದೆಹಲಿಯಲ್ಲಿ ಯಾರಿಗೂ ವಂಚನೆ ಮಾಡದಂತೆ ನೀಡುತ್ತಾ ಬಂದಿದೆ ಕಳೆದ ಎಂಟು ವರ್ಷಗಳಿಂದ. ಆದರೆ ಕರ್ನಾಟಕದಲ್ಲಿ ನಮ್ಮನ್ನೇ ಕಾಪಿ ಹೊಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಕೇವಲ ಏಳು ತಿಂಗಳಲ್ಲಿ ತಮ್ಮ ಗ್ಯಾರೆಂಟಿಗಳನ್ನು ನೀಡಲು ಆಗುತ್ತಿಲ್ಲ ಎಂದು ಆರೋಪಿಸಿದರು.
ನಾನು ಅಧ್ಯಕ್ಷನಾದ ಮೇಲೆ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಯಲ್ಲಿ ನಾಲ್ಕು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೋರಾಟ ಆರಂಭಿಸಿದೆಂದರು.
ರೈತರ ಬಗ್ಗೆ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಆಡಿರುವ ಮಾತನ್ನು ಖಂಡಿಸುವೆ. ಅವರನ್ನು ಸಂಪುಟದಿಂದ ವಜಾ ಮಾಡಿ, ಅವರ ಪರವಾಗಿ ನೀವು ಕ್ಷಮೆ ಕೇಳಿ ಮುಖ್ಯ ಮಂತ್ರಿಗಳೆ ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿನ ಡಿಎಂಎಫ್ , ಕೆಎಂಆರ್ ಇಸಿ ನಿಧಿಯನ್ನು ಸಮರ್ಪಕವಾಗಿ ಬಳಸಿ ಅಭಿವೃದ್ಧಿ ಮಾಡಬೇಕೆಂದರು.
@12bc = ಲೋಕಸಭೆ ಚುನಾವಣೆ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಇಂಡಿಯಾ ಒಕ್ಕೂಟದಿಂದ ಸೀಟು ಹೊಂದಾಣಿಕೆ ದೆಹಲಿ ಮಟ್ಟದಲ್ಲಿ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸಲು ನಡೆಯಲಿದೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ, ಆಮ್ ಆದ್ಮಿ ಪಕ್ಷದ ಮುಖಂಡ ಕೊರ್ಲಗುಂದಿ ಕೇಶವರೆಡ್ಡಿ, ಜಿಲ್ಲಾ ಅಧ್ಯಕ್ಷ ಕೆ.ವಿ.ಮಂಜುನಾಥ ಮೊದಲಾದವರು ಇದ್ದರು.
ಸ್ಪರ್ಧೆ ಖಚಿತ:ಪ್ರತಾಪ್ ರೆಡ್ಡಿ
ನಾನು ಕಾಂಗ್ರೆಸ್ ಟಿಕೆಟ್ ಬಯಸಿದ್ದೆ. ಆದರೆ ಟಿಕೆಟ್ ದೊರೆಯಲಿಲ್ಲ. ಈ ಬಾರಿಯೂ ಯಾರಿಗೂ ದರ್ಶನ ನೀಡದ ಚಂದ್ರಶೇಖರ್ ಪಾಟೀಲ್ ಅವರಿಗೆ ಪಕ್ಷ ಮತ್ತೆ ಟಿಕೆಟ್ ನೀಡಿದೆ. ಅವರ ಬೀದರ್ ಜಿಲ್ಲೆಯಲ್ಲೇ ಹೆಚ್ಚು ಬೆಂಬಲ ನನಗೆ ದೊರೆಯುತ್ತಿದೆ.
ನಮ್ಮ ತಂಡದಿಂದ 40 ಸಾವಿರಕ್ಕೂ ಹೆಚ್ಚು ಮತದಾರರ ನೋಂದಣಿ ಮಾಡಿಸಿದೆ. ನಮ್ಮ ಚಟುವಟಿಕೆಗಳನ್ನು ಗಮನಿಸಿ ಆಮ್ ಆದ್ಮಿ ಪಕ್ಷ ಬೆಂಬಲ ಘೋಷಣೆ ಮಾಡಿದೆ ಅದಕ್ಕೆ ಸ್ವಾಗತಿಸುತ್ತಿರುವೆ. ಇದೇ ರೀತಿ ಎಡ ಪಕ್ಷಗಳು, ಸಂಘ ಸಂಸ್ಥೆಗಳು ಬೆಂಬಲ ನೀಡುತ್ತವೆ. ಕಳೆದ ಬಾರಿ ಮತ ನೀಡುವ ವಿಧಾನದಲ್ಲಿ ಆದ ತಪ್ಪಿನಿಂದಾಗಿ ಸೋಲಾಯ್ತು. ಆದರೆ ಈ ಬಾರಿ ನನ್ನ ಗೆಲುವು ಖಚಿತ ಎಂದರು.