ಕೂಡ್ಲಿಗಿ : ತಾಲೂಕು ಆಡಳಿತ ಸೌದ ಕಛೇರಿಯಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಭೆ ಕರೆಯಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಶಾಸಕರು ಮಾತನಾಡಿದರು ಕೂಡ್ಲಿಗಿ ಕ್ಷೇತ್ರದಲ್ಲಿ ಪ್ರತಿ ದಿನ ನಿತ್ಯ 50-60 ಸಣ್ಣ ರೈತರು ಜಮೀನಿನ ಮತ್ತು ಇತರೆ ದಾಖಲೆಗಳನ್ನು ಇಟ್ಟುಕೊಂಡು ನನ್ನ ಹತ್ತಿರ ಬರುತ್ತಾರೆ. ಅಧಿಕಾರಿಗಳು ರೈತರಿಗೆ ಸರಿಯಾದ ರೀತಿಯಿಂದ ಮಾಹಿತಿ ನೀಡಿ ಸುಮ್ಮನೆ ಕಛೇರಿ ಅಲ್ಲಿ ಇಲ್ಲಿ ಅಲೆದಾಡುವುದನ್ನು ತಪ್ಪಿಸಬೇಕು. ಸಂಬಂಧಪಟ್ಟ ಇಲಾಖೆವಾರು ಅಧಿಕಾರಿಗಳು ಜನರಿಗೆ ಮಾಹಿತಿಯನ್ನು ನೀಡಿ ಸರ್ಕಾರ ಅಥವಾ ಸಮಾಜಕ್ಕಾಗಿ ಶಿಸ್ತುಬದ್ಧವಾಗಿ ಕೆಲಸ ಮಾಡುಬೇಕು. ಅಧಿಕಾರಿಗಳಲ್ಲಿ ಸೋಮಾರಿತನ ಒಳ್ಳೆಯ ಬೆಳವಣಿಗೆ ಅಲ್ಲಾ. ನನ್ನ ಕ್ಷೇತ್ರದಲ್ಲಿ.ಅಧಿಕಾರಿಗಳು ತಪ್ಪು ಮಾಡಿದರೆ ಖಂಡಿತವಾಗಿ ಕ್ರಮ ತೆಗೆದುಕೊಳ್ಳುತ್ತೇನೆ.
ಕ್ಷೇತ್ರದಲ್ಲಿ ರೈತರಿಗೆ ಇರುವ ಅಲ್ಪಾ ಭೂಮಿಯ ದಾಖಲೆಗಳು ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಅಧಿಕಾರಿಗಳು ಸರ್ಕಾರ ವಹಿಸಿರುವ ಕೆಲಸ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಬೇಕು. ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದರೇ ಖಂಡಿತವಾಗಿಯೂ ನಿಮಗೆ ಒಳ್ಳೆಯದೇ ಆಗುತ್ತದೆ. ನಿಮಗೆ ಏನೇ ಸಮಸ್ಯೆ ಆದರೂ ನಾನು ಇದ್ದೇನೆ. ಎಲ್ಲ ದಾಖಲಾತಿಗಳು ಸರಿಯಾಗಿ ಇದ್ದರೆ ನಿಮ್ಮಿಂದಾಗುವ ಕೆಲಸಗಳು ತಡೆ ಇಡಿಯಬಾರದು. ಕ್ಷೇತ್ರದಲ್ಲಿ ಸರ್ಕಾರದ ಭೂಮಿ ಒತ್ತುವರಿ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು.
ಪ್ರತಿಯೊಂದು ದಾಖಲೆಗಳ ವಿವರಗಳು ಅಚ್ಚುಕಟ್ಟಾಗಿ ಇರುವಂತೆ ಕಂಪ್ಯೂಟರ್ ನಲ್ಲಿ ದಾಖಲೀಕರಣ ಮಾಡಬೇಕು. ನಿಯೋಜನೆ ಹೋಗಿರುವ ಅಧಿಕಾರಿಗಳನ್ನು ಬಿಡುಗಡೆ ಮಾಡಿ ಕಳಿಸಿಕೊಡುತ್ತೇವೆ. ಆ ಜಾಗಕ್ಕೆ ಮತ್ತೇ ಹೊಸ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತೇವೆ ಎಂದೂ ತಿಳಿಸಿದರು. ತಿಳಿಸಿದರು ಕೂಡ್ಲಿಗಿ ಪಟ್ಟಣದಲ್ಲಿ ಹೊಸಪೇಟೆ ರಸ್ತೆ ರಾಜೀವನ ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಹಲ್ಲಿ ಸ್ವಚ್ಛತೆ ಹಾಗೂ ಇನ್ನಿತರ ಕಾರ್ಯಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ತಿಳಿಸಿದರು. ಎಂ ರೇಣುಕಮ್ಮ ತಹಶೀಲ್ದಾರ್ ಅವರು. ರವಿಕುಮಾರ್. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು. ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು. ಉಪ ನೊಂದಣಿ ಅಧಿಕಾರಿಗಳು ಸರ್ವೆ ಇಲಾಖೆ ಅಧಿಕಾರಿಗಳು ಹಾಜರಾಗಿದ್ದರು