ಬೆಂಗಳೂರು : ಪ್ರಸ್ತುತ ಬಿಎಂಎಸ್ ಮಹಿಳಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ವಡ್ಡೆ ವೆಂಕಟೇಶ್ ಅವರಿಗೆ
ಪಿಎಚ್.ಡಿ ಪದವಿ ಗೌರವ ನೀಡಲಾಗಿದೆ. ಇವರು ಇತಿಹಾಸ ವಿಭಾಗದ
ಹಿರಿಯ ಪ್ರಾಧ್ಯಾಪಕರಾದ ಪ್ರೊ. ವಿಜಯಲಕ್ಷ್ಮಿ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ದ ಅನ್ಆರ್ಗನೈಸ್ಡ್ ಸೆಕ್ಟರ್ ಅಂಡ್ ವರ್ಕಿಂಗ್ ವಿಮೆನ್ ಇನ್ ಕಾಂಟೆಂಪರರಿ ಬೆಂಗಳೂರು ಸಿಟಿ – ಎ ಸ್ಟಡಿ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರಧಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.