ಬಳ್ಳಾರಿ : ಆಯುಷ ಎನ್ನುವ 01 ವರ್ಷ 02 ತಿಂಗಳಿನ ಮಗುವಿನ ತಾಯಿ ಮರಣ ಹೊಂದಿದ್ದು, ತಂದೆಯ ಮಾಹಿತಿ ಇರುವುದಿಲ್ಲ. ಪೋಷಕರ ಪತ್ತೆಗಾಗಿ ಸಹಕರಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ಅವರು ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ 2023ರ ಏ.24 ರಂದು ನಿರಾಶ್ರಿತ ಪರಿಹಾರ ಕೇಂದ್ರದಿಂದ ಅಮೂಲ್ಯ (ಜಿ) ವಿಶೇಷ ದತ್ತು ಸಂಸ್ಥೆಗೆ ದಾಖಲಿಸಲಾಗಿದೆ.
ಮಗುವಿನ ವಿವರ: ತಂದೆಯ ಹೆಸರು ಸೈಯದ್ ಸಲೀಂ, ಚಹರೆ ಗುರುತು: ಎಣ್ಣೆ ಕೆಂಪು, ತಲೆಯಲ್ಲಿ ಕಪ್ಪು ಕೂದಲು ಹೊಂದಿರುತ್ತಾಳೆ. ಮಗು “ಆಯುಷ” ಳ ಜೈವಿಕ ಪೋಷಕರ ಮತ್ತು ಸಂಬಂಧಿಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಂಟೋನ್‍ಮೆಂಟ್‍ನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯ ದೂ.08392-294473 ಗೆ ಮಾಹಿತಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.