ಕೂಡ್ಲಿಗಿ: ಸರ್ಕಾರಿ ಹಾಸ್ಟಲ್‍ಗಳೆಂದರೆ ಸ್ವಚ್ಛತೆ ಇರುವುದಿಲ್ಲ ಎನ್ನುವ ಭಾವನೆ ಜನಸಾಮಾನ್ಯರು ಆಡುವ ಮಾತುಗಳಾಗಿವೆ. ಆದರೆ ತಾಲೂಕಿನ ಚಂದ್ರಶೇಖರ ಪುರ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗೆ ಭೇಟಿ ನೀಡಿದರೆ ಅಚ್ಚರಿಯಿಂದ ನಿಮಗರಿವಿಲ್ಲದೆ ನಿಮ್ಮ ಹುಬ್ಬೇರುತ್ತದೆ. ನಾಲಿಗೆಯಿಂದ ಪ್ರಶಂಸೆಯ ಮಾತುಗಳು ತೇಲಿ ಬರುತ್ತವೆ. ಯಾರಪ್ಪ ಇಲ್ಲಿನ ವಾರ್ಡನ್ ಮತ್ತು ಅಡಿಗೆ ಸಿಬ್ಬಂದಿಯವರು ಎಂದು ಕೇಳಿ ಅವರ ಬಳಿ ತೆರಳಿ ಕೈ ಕುಲುತ್ತೀರಿ. ಅಷ್ಟರ ಮಟ್ಟಿಗೆ ಈ ಹಾಸ್ಟಲ್ ಆವರಣದಲ್ಲಿ ಬಗೆ ಬಗೆಯ ಸೊಪ್ಪನ್ನು ಬೆಳೆಯಲಾಗಿದೆ. ಚಂದ್ರಶೇಖರ್ ಪುರ ಸರ್ಕಾರಿ ಬಾಲಕರ ಹಾಸ್ಟೆಲ್ ನಿಲಯ ಮೇಲ್ಚಲಕರು ಮತ್ತು ಅಡುಗೆ ಸಿಬ್ಬಂದಿಯವರು ಅವರ ಪರಿಸರ ಕಾಳಜಿಯ ಫಲವಾಗಿ ಉದ್ಯಾನವನವಾಗಿ ಹಾಸ್ಟೆಲ್ ಮಾರ್ಪಟ್ಟಿದೆ. ಈ ಹಾಸ್ಟೆಲ್ ಆವರಣದಲ್ಲಿ ಬಗೆಯ ಪಾಲಕ್, ಕೊತಂಬರಿ, ಸಬ್ಬಕ್ಸಿ, ಮೆಂತೆ, ಮುಂತಾದ ತರಕಾರಿ ಸೊಪ್ಪನ್ನು ಇಲ್ಲಿಯೆ ಬೆಳೆದು ಹಾಸ್ಟೆಲ್‍ನ ತಿಂಡಿ ಊಟಕ್ಕೆ ಬಳಸಲಾಗುತ್ತದೆ. ಉಳಿದ ತರಕಾರಿಗಳನ್ನು ಮಾರ್ಕೆಟಿನಿಂದ ತಂದು ಅಡಿಗೆಗೆ ಬಳಸಲಾಗುತ್ತದೆ. ಅಷ್ಟೆ ಅಲ್ಲದೆ ಆವರಣದಲ್ಲಿ ಗಿಡ, ಮರ, ಬಳ್ಳಿಗಳು ಇಲ್ಲಿದ್ದು ನೋಡುಗರನ್ನು ಆಕರ್ಷಿಸುತ್ತವೆ. ತೆಂಗು, ಗುಲಾಬಿ, ದಾಸವಾಳ, ಸೇರಿದಂತೆ ನಾನಾ ಬಗೆಯ ಹೂವಿನ ಗಿಡಗಳು, ಬೆಳೆಸಿರುತ್ತಾರೆ. ಅಷ್ಟಲ್ಲದೆ ಆವರಣದಲ್ಲಿ 10ರಿಂದ 12 ತೆಂಗಿನ ಮರಗಳು ಇದ್ದು ಇದರಿಂದ ತೆಂಗಿನ ಕಾಯಿ ಅಡಿಗೆಗೆ ಉಪಯೋಗಿಸುತ್ತಾರೆ, ಅಲ್ಲದೆ ಮೇಲಧಿಕಾರಿಗಳು ಭೇಟಿ ಕೊಟ್ಟಾಗ ತಣ್ಣನೆ ಹೇಳಿ ನೀರನ್ನು ಕೊಡುತ್ತಾರೆ, ಇನ್ ಉತ್ತಮ ಪರಿಸರದ ನಡುವೆ ಪಾಠ ಪ್ರವಚನಗಳು ನಡೆದರೆ ಮಕ್ಕಳ ಕಲಿಕೆ ಗುಣಮಟ್ಟದಿಂದ ಕೂಡಿರುತ್ತದೆ. ಉತ್ತಮ ಪರಿಸರದಲ್ಲಿ ಪ್ರತಿನಿತ್ಯ ಕಳೆದರೆ ಮನಸ್ಸು ಪ್ರಪುಲ್ಲತೆಯಿಂದ ಕೂಡಿರುತ್ತದೆ. ಉತ್ತಮ ಪರಿಸರದೊಂದಿಗೆ ಬೆರೆತರೆ ಧನಾತ್ಮಕ ಶಕ್ತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಈ ಹಾಸ್ಟೆಲ್‍ನಲ್ಲಿದ್ದು ಓದುವ ವಿದ್ಯಾರ್ಥಿಗಳೆ ಭಾಗ್ಯವಂತರು ಎಂದರೆ ತಪ್ಪಾಗಲಾರದು. ಇಲ್ಲಿನ ವಸತಿ ನಿಲಯದ ಮೇಲ್ಚಲಕರು ಎ.ಕೆ ಪ್ರಕಾಶ್ ಹಾಗೂ ಸಿಬ್ಬಂದಿಗಳು ರಂಗಪ್ಪ ಚೌಡಮ್ಮ ದಂಪತಿಗಳು ಹಾಗೂ ಸಾಕಮ್ಮ, ನಿಂಗಮ್ಮ, ಗಣೇಶ್ ಇವರ ಶ್ರಮದಿಂದ ಬಿಡುವಿನ ಸಮಯದಲ್ಲಿ ಈ ಕೈ ತೋಟ ನಿರ್ವಹಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ತರಕಾರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
•ಸ್ವಚ್ಛ ಅಡುಗೆ ಕೋಣೆ: ಅಡುಗೆ ಕೋಣೆಯಲ್ಲಿ ಕಣ್ಣು ಹಾಯಿಸಿದರೆ ಎಲ್ಲೆಂದರಲ್ಲಿ ಸ್ವಚ್ಛತೆ ಎದ್ದು ಕಾಣುತ್ತದೆ. ಅಡುಗೆ ತಯಾರಕರಿಂದ ಕೋಣೆ ಸಂಪೂರ್ಣ ಸ್ವಚ್ಛಂದವಾಗಿ ಹೊಳೆಯುತ್ತದೆ.
•ಅಲ್ಪಸ್ವಲ್ಪ ನೀರಿನಲ್ಲೇ ಬೆಳೆ: ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಅಲ್ಪಸ್ವಲ್ಪ ನೀರು ಸ್ವಲ್ಪ ಜಾಗದಲ್ಲಿ ವಿವಿಧ ಬಗೆಯ ಸೊಪ್ಪು ತರಕಾರಿಗಳನ್ನು ಬೆಳೆಸಿದ್ದೇವೆ. ಗ್ರಾಮ ಪಂಚಾಯಿತಿಯಿಂದ ಬರುವ ಅಲ್ಪ ಸ್ವಲ್ಪ ನೀರಿನಿಂದ ಬೆಳೆಯುತ್ತಿದ್ದೇವೆ. ಹಾಸ್ಟೆಲಿಗೆ ಸ್ವಂತ ಕೊಳವೆ ಬಾವಿ ಇಲ್ಲ, ನೀರು ಇದ್ದರೆ ಇನ್ನು ಬೇಕಾದಷ್ಟು ತರಕಾರಿಗಳನ್ನು ಬೆಳೆಯಬಹುದು.
ವಸತಿ ನಿಲಯ ತರಕಾರಿ ಬೆಳೆಯಲು ಸ್ವಾವಲಂಬಿಯಾಗಿರುವುದಕ್ಕೆ ಅಡಿಗೆ ಸಿಬ್ಬಂದಿಗಳು ಕಾರಣ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕೆಂಬ ಉದ್ದೇಶದಿಂದ, ಸಿಬ್ಬಂದಿಗಳ ಸ್ವಚ್ಛತೆ ಹಾಗೂ ಅವರ ಶ್ರಮದಿಂದ ಶುದ್ಧ ತರಕಾರಿಗಳನ್ನು ಬೆಳೆಸಿ ನಿತ್ಯ ಅಡುಗೆಗೆ ಬಳಸಲಾಗುತ್ತಿದೆ
•ಪ್ರಕಾಶ್, ವಸತಿ ನಿಲಯ ಮೇಲ್ಚಲಕರು ಸಿ.ಎಸ್ ಪುರ