ಹೊಸಪೇಟೆ : ಸತತ ಪ್ರಯತ್ನ ಹಾಗೂ ಇಂಗ್ಲೀಷ್ ಭಾಷೆಯ ಅಭ್ಯಾಸದಿಂದ ಇಂಗ್ಲಿಷ್ ಸಂವಹನ ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಎಂದು ಸಿದ್ದಗಂಗಾ ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕ ಡಾ ಗಿರೀಶ್ ವೈ ಎಂ ಹೇಳಿದರು.
ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ “ಉದ್ಯೋಗಕ್ಕಾಗಿ ಸಂವಹನ ಕೌಶಲ್ಯಗಳು” ಎಂಬ ವಿಷಯದ ಕುರಿತು ಮಾತನಾಡುತ್ತಾ ಇಂದಿನ ದಿನದಲ್ಲಿ ವಿವಿಧ ಉದ್ಯೋಗಗಳಿಗೆ ಅವಶ್ಯಕವಿರುವ ಇಂಗ್ಲೀಷ್ ಭಾಷಾ ಕೌಶಲ್ಯಗಳನ್ನು ವಿವರಿಸಿದರು. ಇಂಗ್ಲಿಷ್ ಭಾಷಾ ಸಂವಹನ, ಇ-ಮೇಲ್ ಬಳಕೆ, ವ್ಯಕ್ತಿತ್ವ ವಿಕಸನ, ಗುಂಪು ಚರ್ಚೆ ಇತ್ಯಾದಿ ವಿಷಯಗಳ ಪ್ರಾಮುಖ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ವೀರೇಂದ್ರ ಪಾಟೀಲ್ .ಸಿ ಅವರು ವಹಿಸಿದ್ದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ. ಗುರುರಾಜ್ ಅವರಾದಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಇಂಗ್ಲಿಷ್ ಅಧ್ಯಾಪಕ ಶಬ್ಬೀರ್ ಸ್ವಾಗತಿಸಿದರು. ಅಧ್ಯಾಪಕರಾದ ಜಿತೇಂದ್ರ ಅವರು ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು.
ಪ್ರಶಾಂತ್ ಬಾಬು ವಂದಿಸಿದರು. ಸುಕನ್ಯಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಇಂಗ್ಲೀಷ್ ವಿಭಾಗದ ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.