ಕೂಡ್ಲಿಗಿ : ತಾಲೂಕಿನ ಜುಮ್ಮೋಬನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಭಾರತದ ಇತಿಹಾಸದಲ್ಲೇ ಗಣರಾಜ್ಯೋತ್ಸವ ದಿನ ಮಹತ್ವದ ದಿನವಾಗಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ .ಡಿ ಎಂ. ಸಿ .ಅಧ್ಯಕ್ಷರಾದ ಹೊನ್ನೂರಪ್ಪ 75 ನೇ ಗಣರಾಜ್ಯೋತ್ಸವದಲ್ಲಿ ಧ್ವಜಾವಂದನೆ ಸ್ವೀಕರಿಸಿ ಮಾತನಾಡಿದರು.
ಈ ದಿನವು ದೇಶ ಸ್ವಾತಂತ್ರ್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ ಎಂದರು. ಭಾರತದ ಸರ್ವ ಪ್ರಜೆಗೂ ಸಮಾನತೆ, ಶಿಕ್ಷಣ ಇತರೆ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಎಲ್ಲ ನಾಯಕರನ್ನು, ಅವರ ಸಾಧನೆಯನ್ನು ನೆನೆಯಲಾಗುತ್ತದೆ. ಎಂದರು. ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ,ಮತ್ತು ಸಿಬ್ಬಂದಿ ವರ್ಗ ,ಹಾಗೂ ಶಿಕ್ಷಕರಾದ ಗಂಗಾಧರ , ಕಾರ್ಯಕ್ರಮ ನಿರೂಪಿಸಿದರು .ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ,ಹಾಗೂ ಸರ್ವ ಸದಸ್ಯರು ,ಊರಿನ ಮುಖಂಡರು ಶಾಲೆಯ ಮಕ್ಕಳು ,ಉಪಸ್ಥಿತರಿದ್ದರು.