ಬಳ್ಳಾರಿ : ನಗರದ 23ನೇ ವಾರ್ಡ್ ಡಾ|| ಬಿ.ಆರ್.ಅಂಬೇಡ್ಕರ್ ನಗರ ಮಹಾನಂದಿ ಕೊಟ್ಟಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 75ನೇ ಗಣರಾಜ್ಯೋತ್ಸವದಲ್ಲಿ ಡಾ.ಬಿ.ಆರ್.ಆಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮುಖ್ಯ ಗುರುಗಳಾದ ಹೆಚ್.ನಾಗರಾಜ್ ರವರು ತದನಂತರದಲ್ಲಿ ಧ್ವಜಾರೋಹಣ ನೆರವೇರಿಸಿದರು. ನಂತರದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯಾರಾದ ಶ್ರೀಮತಿ ಸಿದ್ದಲಿಂಗಮ್ಮ.ಎಲ್ , ಶ್ರೀಮತಿ ಎಂ.ಪ್ರಮೀಳಾ ಬಾಯಿ , ಅತಿಥಿ ಶಿಕ್ಷಕಿಯಾದ ಶ್ರೀಮತಿ ಅನಿತ.ಹೆಚ್.ವೈ ಶಾಲೆಯ ಅಡುಗೆ ಸಹಾಯಕಿರಾದ ಶ್ರೀಮತಿ ಗೌರಮ್ಮ , ರುದ್ರಮ್ಮ , ಶಾಲೆ ವಿದ್ಯಾರ್ಥಿಗಳು ಹಾಗೂ ನಗರದ ಮುಖಂಡರುಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.