ಕೂಡ್ಲಿಗಿ : ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಹಾಗೂ ವಿವಿಧ ಸಂಸ್ಥೆಗಳು ಹಮ್ಮಿಕೊಂಡಿರುವ ಚಿಕ್ಕಜೋಗಿಹಳ್ಳಿಯಲ್ಲಿ 2023 – 24 ನೇ ಸಾಲಿನ ಎಸ್, ಎಸ್, ಎಲ್, ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಗಾರ ವನ್ನು ಕೂಡ್ಲಿಗಿ ಕ್ಷೇತ್ರದ ಮಾನ್ಯ ಶಾಸಕರಾದ ಎನ್ ಟಿ ಶ್ರೀನಿವಾಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ರಾಜ್ಯದಲ್ಲಿ ಶೈಕ್ಷಣಿಕವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮುಂದುವರಿದಂತೆ ವಿಜಯ ನಗರ ಜಿಲ್ಲೆಯೂ ಸಹ ಉತ್ತಮ ಫಲಿತಾಂಶವನ್ನು ನೀವುಗಳು ತಂದುಕೊಟ್ಟು ನಮ್ಮ ವಿಜಯನಗರ ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು. ವಿದ್ಯಾರ್ಥಿಗಳೇ
ಪರೀಕ್ಷೆ ಎಂಬುದು ಯುದ್ದವಲ್ಲ. ಅದೊಂದು ಹಬ್ಬದಂತೆ ಸಂಭ್ರಮಿಸಬೇಕು. ಶಿಕ್ಷಕರು ತರಗತಿಯಲ್ಲಿ ಹೇಳಿಕೊಟ್ಟಿದ್ದನ್ನು ಅರ್ಥಮಾಡಿಕೊಳ್ಳಬೇಕು. ನೀವುಗಳು ಓದಿದ್ದನ್ನು ಮಲಗುವ ಮನ್ನ ಮತ್ತೊಮ್ಮೆನೆನಪು ಮಾಡಿಕೊಳ್ಳಬೇಕು. ಗೊಂದಲ, ಸಮಸ್ಯೆ ಇದ್ದರೆ ಶಿಕ್ಷಕರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕೂಡ್ಲಿಗಿ ಕ್ಷೇತ್ರದಲ್ಲಿ ಎಸ್. ಎಸ್. ಎಲ್. ಸಿ. ನಲ್ಲಿ ಹೆಚ್ಚು ಅಂಕ ಪಡೆದವರಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ಕೊಡುತ್ತೇನೆ ನೀವುಗಳು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದುಕೊಡಬೇಕು ಎಂದರು. ನಾನು ಈಗಾಗಲೇ ನಮ್ಮ ಸರ್ಕಾರದ ಸಂಬಂಧಪಟ್ಟ ಸಚಿವರ ಹತ್ತಿರ ಮಾತನಾಡಿ ನಮ್ಮ ಕ್ಷೇತ್ರಕ್ಕೆ ವಸತಿ ಶಾಲೆಗಳು ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಬೇಕೆಂದು ಮನವಿ ಮಾಡಿರುತ್ತೇನೆ ಇದಕ್ಕೆ ನಮ್ಮ ಸರ್ಕಾರನೂ ಕೊಡ ಅವಕಾಶ ಮಾಡಿಕೊಡುತ್ತದೆ ಈ ಭಾಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಈ ವೇಳೆ ಸರ್ಕಾರಿ ಬಾಲಕರ ಪ್ರೌಢಶಾಲೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.