ಕೂಡ್ಲಿಗಿ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮಾನ್ಯಶಾಸಕರು ಕೂಡ್ಲಿಗಿ ಪಟ್ಟಣದ ಪ್ರವಾಸ ಮಂದಿರದಲ್ಲಿ ಗಂಗ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಪಂಪ್ ಸೆಟ್ ಉಪಕರಣಗಳನ್ನು ವಿತರಿಸಿದರು. ಕೂಡ್ಲಿಗಿ ಕ್ಷೇತ್ರದ ನಿಂಬಳಗೆರೆ, ಚಿಕ್ಕಜೋಗಿಹಳ್ಳಿ, ಖಾನಹೊಸಹಳ್ಳಿ, ಪಿಚ್ಛಾರಹಟ್ಟಿ, ಕೋಣನಹಳ್ಳಿ ಮತ್ತು ಗುಡೇಕೋಟೆ ಭಾಗದ ಫಲಾನುಭವಿಗಳಿಗೆ ಪಂಪ್ ಸೆಟ್ ಉಪಕರಣಗಳನ್ನು ವಿತರಿಸಲಾಯಿತು ಶಾಸಕರು ಮಾತನಾಡಿ, ಕ್ಷೇತ್ರದಲ್ಲಿ ರೈತನ ಬದುಕು ಹಸನಾಗಿಸಲು ಸದಾ ಸಿದ್ದನಾಗಿರುವೆ
ರೈತರು ಈ ಯೋಜನೆಯಲ್ಲಿ ಪಡೆದುಕೊಂಡಿರುವ ಉಪಕರಣಗಳನ್ನು ತಾವು ಉಪಯೋಗಿಸಿಕೊಂಡು ತಮ್ಮ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಲೆಂದು ಈ ಸಂದರ್ಭದಲ್ಲಿ ನಾನು ಶುಭ ಹಾರೈಸುತ್ತೇನೆ. ಕೂಡ್ಲಿಗಿ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳನ್ನು ಸಿಗುತ್ತವೆ. ಆದರೆ ಅಂತಹ ಹಂತವಾಗಿ ಪ್ರತಿಯೊಬ್ಬರಿಗೂ ಅನುಕೂಲ ಮಾಡುತ್ತೇನೆ ಕೆಲವೊಂದು ಸಂದರ್ಭದಲ್ಲಿ ಸರ್ಕಾರದ ಸೌಲಭ್ಯಗಳನ್ನು ಹಂಚಿಕೆ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ನಾನು ಕೂಡ ಈಗಾಗಲೇ ನಮ್ಮ ಸರ್ಕಾರದ ಜೊತೆಗೆ ಮತ್ತು ಸಂಬಂಧಪಟ್ಟ ಸಚಿವರ ಜೊತೆಗೆ ನಮ್ಮ ಕ್ಷೇತ್ರಕ್ಕೆ ಬೇಕಾಗುವ ಎಲ್ಲಾ ರೀತಿಯಿಂದ ಕ್ರಿಯಾಯೋಜನೆಯನ್ನು ತಯಾರಿಸಿ ನಮ್ಮ ಸರ್ಕಾರಕ್ಕೆ ಕೊಟ್ಟಿರುತ್ತೇನೆ ನಮ್ಮ ಸರ್ಕಾರ ಕೂಡ ನಮ್ಮ ಕ್ಷೇತ್ರಕ್ಕೆ ಬೇಕಾಗುವ ಸೌಲಭ್ಯಗಳನ್ನು ಕೂಡ ಅನುಕೂಲ ಮಾಡಿಕೊಡುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕರಾದ ಮೆಹಬೂಬಾ ಭಾಷಾ,. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸಿದ್ದನಗೌಡ್ರು, ಕಾಂಗ್ರೆಸ್ ಮುಖಂಡರಾದ ಎನ್‌ಟಿ ತಮ್ಮಣ್ಣ. ಕಾವಲಿ ಶಿವಪ್ಪ ನಾಯಕ, ಅಜ್ಜನ ಗೌಡ್ರು , ಜಿಲಾನ್, ಬಾಬು, ಕೂಡ್ಲಿಗಿ ರಾಘವೇಂದ್ರ, ಸಿ.ಎಸ್. ಪುರ ಬಸವರಾಜ, ಉಮೇಶ ನಾಯಕ , ಎಕ್ಕೆಗೊಂದಿ ನಾಗರಾಜ, ಪಲಾನುಭವಿಗಳು, ರಾಜಕೀಯ ಮುಖಂಡರು ಉಪಸ್ಥಿತರಿದ್ದರು.