17.1 C
New York
Sunday, September 8, 2024

ವಿಮ್ಸ್ ಆಸ್ಪತ್ರೆಯಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಉಚಿತ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಒದಗಿಸಬೇಕೆಂದು : ಕಾರ್ಯಾಧ್ಯಕ್ಷ ಡಿ.ವಿಜಯಕುಮಾರ್ ಒತ್ತಾಯ

ಬಳ್ಳಾರಿ : ನಗರದಲ್ಲಿ ಇಂದು ಎಸ್.ಸಿ.ಪಿ./ ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೋಗಿಗಳಿಗೆ ಸಮಪರ್ಕವಾಗಿ ಉಚಿತ ವೈದ್ಯಕೀಯ ಸೇವಾ ಸೌಲಭ್ಯ ಒದಗಿಸಬೇಕೆಂದು ಬಳ್ಳಾರಿಯ ಅಖಿಲ ಭಾರತೀಯ ಪರಿಶಿಷ್ಟ ಜಾತಿ ಯುವಜನ ಸಮಾಜವು ವಿಮ್ಸ್ ಮುಖ್ಯ ಆಡಳಿತಾಧಿಕಾರಿಯನ್ನು ಒತ್ತಾಯಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಳ್ಳಾರಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟಡ ಪಂಗಡದ ಹಲವಾರು ಜನರು ಅತ್ಯಂತ ಬಡತನದಿಂದ ಕೂಡಿದವರಾಗಿದ್ದು,ಅಖಿಲ ಭಾರತೀಯ ಪರಿಶಿಷ್ಟ ಜಾತಿ ಯುವಜನ ಸಮಾಜವು ೨೦೨೩ರ ಸರ್ಕಾರಿ ಆದೇಶದಂತೆ ವಿಮ್ಸ್ ಆಸ್ಪತ್ರೆಯಲ್ಲಿ ಇವರಿಗಾಗಿ ಈ ಸದರಿ ಯೋಜನೆಯನ್ನು ಉಚಿತವಾಗಿ ಉಪಯೋಗಿಸಿಕೊಳ್ಳಲು ಜಾರಿಗೊಳಿಸಿದೆ. ಆದರೆ ಈ ಯೋಜನೆಯಡಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳಿಗೆ ದಾರಿ ತಪ್ಪಿಸಿ ಪರದಾಡುವಂತಹ ಕೆಲಸ ವಿಮ್ಸ್ ಆಸ್ಪತ್ರೆಯಲ್ಲಿ ನಡೆಯುತ್ತಿರುವುದು ಕಂಡು ಬಂದಿದೆ ಎಂದು ದೂರಿದ್ದಾರೆ.
ಸರ್ಕಾರದ ಆದೇಶದ ಮೇರೆಗೆ ವಿಮ್ಸ್ ಸಮೂಹ ಅಸ್ಪತ್ರೆಯಲ್ಲಿ ಬರುವ ಎಲ್ಲ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೋಗಿಗಳಿಗೆ ಕೇವಲ ಜಾತಿ ಆಧಾರದ ಮೇರೆಗೆ ಉಚಿತ ಚಿಕಿತಸೆ ನಿಡಬೇಕು. ಆದರೆ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುವುದಿಲ್ಲ. ಆದರೆ ಈ ಆದೇಶವನ್ನು ಆಸ್ಪತ್ರೆಯಲ್ಲಿ ಸಮಪರ್ಕವಾಗಿ ಅನುಷ್ಠಾನಗೊಳಿಸದೆ ನಿರ್ಲಕ್ಷö್ಯವಹಿಸಿರುವುದು ಕಂಡು ಬಂದಿದೆ. ಕಾರಣ ಇನ್ನು ಮುಂದೆಯಾದರೂ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಬಡವರ ಆರೋಗ್ಯ ರಕ್ಷಣೆ ಮಾಡಬೇಕೆಂದು ಅಖಿಲ ಭಾರತೀಯ ಪರಿಶಿಷ್ಟ ಜಾತಿ ಯುವಜನ ಸಮಾಜದ ಬಳ್ಳಾರಿ ಘಟಕದ ಕಾರ್ಯಾಧ್ಯಕ್ಷರಾದ ಡಿ.ವಿಜಯಕುಮಾರ್ ಅವರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles