9.1 C
New York
Friday, October 18, 2024

ಶ್ರಾವಣಮಾಸದ ಅಮವಾಸೆಯ ಪ್ರಯುಕ್ತ ಹೂಡೇಂ ಶ್ರೀ ಮಾಯಮ್ಮ ದೇವಿಗೆ ವಿಶೇಷ ಪೂಜೆ

ಕೂಡ್ಲಿಗಿ: ತಾಲೂಕಿನ ಹೂಡೇಂ ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ಶ್ರೀ ಗಾಣಗಟ್ಲೆ ಕೆರೆ ಮಾಯಮ್ಮ ದೇವಿಗೆ ಭಾನುವಾರ ಶ್ರಾವಣಮಾಸದ ಅಮವಾಸೆಯ ಪ್ರಯುಕ್ತ ದೇವಿಗೆ ಬೆಳೆಗೆ ಯಿಂದ ವಿಶೇಷ ಪೂಜೆ ನಡೆದವು. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ಹುಣ್ಣಿಮೆಯಂದು ವಿಶೇಷ ಪೂಜೆ ನೆರವೇರುತ್ತದೆ. ಇಂದು ಬೆಳಗ್ಗೆ ಸುಪ್ರಭಾತ ಸೇವೆ, ಶುದ್ಧೋದಕ ಅಭಿಷೇಕ, ಪಂಚಾಮೃತಾಭಿಷೇಕ, ವೀಳ್ಯದೆಲೆ ಅಲಂಕಾರ, ಅರ್ಚನೆ, ಮಹಾಮಂಗಳಾರತಿ ನಡೆಯಿತು. ಭಕ್ತಜನ ರಕ್ಷಕಿ ಎಂದೇ ಬಿರುದಾಂಕಿತ ಶ್ರೀ ಮಹಾ ಲಕ್ಷ್ಮಿ ಶ್ರೀ ಮಾಯಮ್ಮ ತಾಯಿ ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವಳು. ಆ ತಾಯಿ ನೂರಾರು ವರ್ಷಗಳ ಹಿಂದೆ ತನ್ನ ವಾಹನ ಕೋಣನ ಮೇಲೆ ಕುಳಿತು ಹೂಡೇಂ ಗಾಣಗಟ್ಲೆ ಕೆರೆ ದಡದಲ್ಲಿ ಬಂದು ನೆಲೆಸಿದಳು ಎಂದು ಯಜಮಾನರು ಹೇಳುತ್ತಾರೆ‌.

ಇತ್ತೀಚಿನ ದಿನಗಳಲ್ಲಿ ಶ್ರೀ ಕ್ಷೇತ್ರ ಗಾಣಗಟ್ಟೆಯಿಂದ ಮಾಯಮ್ಮ ಅಲ್ಲಿಂದ ಮತ್ತೆ ತನ್ನ ತವರು ಮನೆಗೆ ಮರಳಿದ್ದಾಳೆ ಎಂಬ ವಾಡಿಕೆಯಂತೆ ಪ್ರತಿ ವಾರವು ದೇವಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ದೇವಿ ತನ್ನನ್ನು ನಂಬಿ ಬಂದವರನ್ನು ಪೊರೆಯುತ್ತಾಳೆ ಹಾಗೂ ಇಷ್ಟಾರ್ಥ ಸಿದ್ಧಿಸುತ್ತಾಳೆ ಎಂಬ ನಂಬಿಕೆ ಭಜಕರಲ್ಲಿದೆ. ಬೆಳಗ್ಗೆ 5 ರಿಂದ ಸಂಜೆ 7 ಗಂಟೆಯ ವರೆಗೆ ನಡೆದ ವಿಶೇಷ ಪೂಜೆಯಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು ಹಾಗೂ ದೇವಿಯ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಯಕ್ಷಗಾನ ನಾಟಕ ಕಾರ್ಯಕ್ರಮವನ್ನು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನೆರವೇರಿತು ಹಾಗೂ ಭಜನೆ, ಉರುಮೆ, ತಮಟೆಗಳಿಂದ ಅದ್ದೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಹೂಡೇಂ ಗಾಣಗಟ್ಲೆ ಕೆರೆ ಮಾಯಮ್ಮ ದೇವಿಯ ದರ್ಶನ ಪಡೆದು ಭಕ್ತಿಯಿಂದ ಪೂಜೆ, ಹಣ್ಣು ಕಾಯಿ ಪೂಜಾ ಸೇವೆ ಸಮರ್ಪಿಸಿದರು.

ಅನ್ನ ಸಂತರ್ಪಣೆ: ಸಮಾಜ ಸೇವಕರಿಂದ ಅಚ್ಚುಕಟ್ಟು ವ್ಯವಸ್ಥೆ: ಶ್ರಾವಣಮಾಸದ ಅಮವಾಸೆಯ ಪ್ರಯುಕ್ತ ಶ್ರೀ ಹೂಡೇಂ ಗಾಣಗಟ್ಲೆ ಕೆರೆ ಮಾಯಮ್ಮ ದೇವಿಯ ದರ್ಶನಕ್ಕೆ ಬರುವ ಭಕ್ತರ ಭಕ್ತಿಯ ದಾಹ ನೀಗಿಸುವ ಜತೆಗೆ ಹಸಿವನ್ನೂ ನೀಗಿಸುವ ಕಾರ್ಯ ನಡೆಯಿತು. ಭಾನುವಾರ ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ 6 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಹೂಡೇಂ ಕ್ಷೇತ್ರ ತಾಲೂಕ್ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಗುತ್ತಿಗೆದಾರರು, ಸಮಾಜ ಸೇವಕರಾದ ಪಾಪ ನಾಯಕ ಹಾಗೂ ಕುಟುಂಬಸ್ಥರಿಂದ ಅನ್ನ- ಸಾಂಬಾರ್, ಪಾಯಸ, ಪುಳಿಯೋಗರೆ, ದಾಹ ನೀಗಿಸಲು ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಭಕ್ತರಿಗೆ ವ್ಯವಸ್ಥೆಯನ್ನು ಮಾಡಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles