9.1 C
New York
Friday, October 18, 2024

ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು ಡಾ ಶ್ರೀನಿವಾಸ್ ‌.ಎನ್.ಟಿ.

ಕೂಡ್ಲಿಗಿ : ತಾಲೂಕು ಹೂಡೇಂ ವಲಯ ಮಟ್ಟ ಕ್ರೀಡಾಕೂಟಗಳನ್ನು ಕಾತ್ರಿಕೆಹಟ್ಟಿ ಗ್ರಾಮದಲ್ಲಿ ವಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಯಿತು ವಲಯಮಟ್ಟ ಕ್ರೀಡಾಕೂಟಕ್ಕೆ ಶಾಸಕರಾದ ಡಾ. ಶ್ರೀನಿವಾಸ್ ‌.ಎನ್.ಟಿ. ಅವರು ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ
ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ’ ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಪೂರಕ. ದೈಹಿಕ ಶಿಕ್ಷಕರ ತೀರ್ಪುಗಳು ಮುಗ್ಧ ಮನಸ್ಸುಗಳ ಮೇಲೆ ಪರಿಣಾಮ ಬೀರದಂತಿರಲಿ. ಮಕ್ಕಳಿಗೆ ಉತ್ತೇಜನ ನೀಡುವಂತಹ ಯುವಕರು ಎಲ್ಲೆ ಮೀರದೆ ಪ್ರೋತ್ಸಾಹಿಸಬೇಕು ಎಂದರು
ಶಿಕ್ಷಣವು ಜನರನ್ನು ಸಾಕ್ಷರರನ್ನಾಗಿ ಮಾಡುತ್ತದೆ.ಶಿಕ್ಷಣವು ವ್ಯಕ್ತಿಯಲ್ಲಿ ಸಂವಹನ ಕೌಶಲ ಬೆಳೆಸುತ್ತದೆ.ಈ ಯುಗದಲ್ಲಿ ವ್ಯಕ್ತಿಯನ್ನು ಉತ್ತಮ ತಂತ್ರಜ್ಞಾನದ ಬಳಕೆದಾರನಾಗಿ ಮಾಡಿಸುತ್ತದೆ. ಶಿಕ್ಷಣದ ಸಹಾಯದಿಂದ ಜನರು ಹೆಚ್ಚು ಪ್ರಬುದ್ಧರಾಗುತ್ತಾರೆ.
ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ತಡೆಗಟ್ಟಿ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ಕಾತ್ರಿಕೆಹಟ್ಟಿ, ಜುಮ್ಮೋಬನಹಳ್ಳಿ- ಮ್ಯಾಸರಹಟ್ಟಿ, ಜರ್ಮಲಿ, ಅರ್ಜುನ ಚಿನ್ನೇನಹಳ್ಳಿ, ಮತ್ತು ತಾಲೂಕಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಪ್ರೌಢಶಾಲೆಗಳು ಅವಶ್ಯಕತೆ ಇದೆಯೋ ಅಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳನ್ನು ನಿರ್ಮಿಸಲು ಈಗಾಗಲೇ ನಾನು ಸಂಬಂಧಪಟ್ಟ ಸಚಿವರ ಜೊತೆಗೆ ಮಾತನಾಡಿದ್ದೇನೆ ಎಂದರು ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ, ಪೂಜಾರಹಳ್ಳಿ ಗ್ರಾ‌.ಪಂ ಅಧ್ಯಕ್ಷೆ ಜ್ಯೋತಿ ವೆಂಕಟೇಶ್, ಹೂಡೇಂ ಗ್ರಾ‌‌.ಪಂ ಅಧ್ಯಕ್ಷ ರಾಮಚಂದ್ರಪ್ಪ ಬಿ, ಪೂಜಾರಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ದುರುಗಮ್ಮ ದುರುಗಪ್ಪ, ಕಾಂಗ್ರೆಸ್ ಮುಖಂಡ ಜಿ ಓಬಣ್ಣ, ಹೂಡೇಂ ಮಾಜಿ ತಾ.ಪಂ ಸದಸ್ಯ ಜಿ ಪಾಪ ನಾಯಕ, ಪಿಎಲ್.ಡಿ ಬ್ಯಾಂಕ್ ಸದಸ್ಯರು ಕೆ.ಟಿ ಮೂರ್ತಿಪ್ಪ ಹೂಡೇಂ, ಗ್ರಾ.ಪಂ ಸದಸ್ಯರಾದ ಶಿಲ್ಪಾ ಪಾಲಾಕ್ಷಿ, ಕುರಿ ಬೈಯಣ್ಣ, ರವೀಂದ್ರ, ರಾಜಣ್ಣ, ಮಲ್ಲಮ್ಮ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಓಬಣ್ಣ ಕುಮತಿ, ಸೋಮನಗೌಡ್ರು ಲೋಕಿಕೆರೆ, ಕಾತ್ರಿಕೆಹಟ್ಟಿ ಶಾಲೆಯ ಮುಖ್ಯ ಶಿಕ್ಷಕ ಗುರುರಾಜ್, ಎ.ಕೆ ಮಂಜಪ್ಪ ಎಸ್ಡಿಎಂಸಿ ಅಧ್ಯಕ್ಷ ಮಾಳೆಹಳ್ಳಿ ಸೇರಿದಂತೆ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಮುಖಂಡರು ಎಲ್ಲಾ ಶಾಲೆಯ ಶಿಕ್ಷಕರ, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles