9.1 C
New York
Friday, October 18, 2024

ಗಂಡ ಬೊಮ್ಮನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಓಬಮ್ಮ ಅವಿರೋಧ ಆಯ್ಕೆ

ಕೂಡ್ಲಿಗಿ : ತಾಲ್ಲೂಕಿನ. ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬುದುವಾರ ನಡೆದ ಚುನಾವಣೆಯಲ್ಲಿ ಓಬಮ್ಮ ಅಧ್ಯ ಅಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷರ ಶ್ರೀಮತಿ ನವಲಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಓಬಮ್ಮ ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶೀಲ್ದಾರ್ ರೇಣುಕಮ್ಮ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಓಬಮ್ಮ. ನವರಿಗೆ ಅಧಿಕಾರ ವಹಿಸಿಕೊಟ್ಟರು.
ಉಪಾಧ್ಯಕ್ಷ ಆರ್ ಬಸವರಾಜ್ ಸೇರಿದಂತೆ 15 ಮಂದಿ ಸದಸ್ಯರು ಹಾಜರಿದ್ದರು. 2 ಸದಸ್ಯರು ಗೈರು ಹಾಜರಾಗಿದ್ದರು.
ನೂತನ ಅಧ್ಯಕ್ಷರು ಓಬಮ್ಮ ಮಾತನಾಡಿ ಮಾತನಾಡಿ, ಗಂಡ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಮ್ಮ ನಡವಲಹಳ್ಳಿ ಗ್ರಾಮ. ಇತಿಹಾಸದಲ್ಲಿ ನಮ್ಮ ಪುಟ್ಟ ಗ್ರಾಮದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ. ಇಲ್ಲಿಯವರೆಗೂ ಯಾರು ಆಯ್ಕೆ ಆಗಿರುವುದಿಲ್ಲ. ಆದರೆ ಇಂದು ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಂತಸ ತಂದಿದೆ ನನ್ನನ್ನು ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಳ್ಳಿಗಳಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ನನ್ನನ್ನು ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಗ್ರಾಮದ ಹಿರಿಯ ಮುಖಂಡರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ. ರಾಮಕೃಷ್ಣಪ್ಪ. ಕಾರ್ಯದರ್ಶಿಗಳಾದ ಈಶ್ವರಯ್ಯ ಸ್ವಾಮಿ. ಗುಡೆಕೋಟೆ ಪೊಲೀಸ್ ಠಾಣೆ ಪಿ ಎಸ ಐ. ಸುಬ್ರಹ್ಮಣ್ಯಂ. ಆರ್ ಐ. ಚೌಡಪ್ಪ. ಶಿವಕುಮಾರ್ . ಎಸ್ ವೆಂಕಟೇಶ್. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು. ಜಿ ಎಂ ಬಸಣ್ಣ. ಮಂಜಣ್ಣ ನರಸಿಂಹನಗಿರಿ. ವೆಂಕಟೇಶ್ ದಿಬ್ಬದಹಳ್ಳಿ. ಎಂಪಿ ಚಂದ್ರಣ್ಣ. ಚನ್ನಪ್ಪ ಮಾಜಿ ಅಧ್ಯಕ್ಷರು. ಎರ್ರಿಸ್ವಾಮಿ ವಿ ಎಸ್ ಎಸ್ ಏನ್ ಅಧ್ಯಕ್ಷರು. ನಾಗರಾಜ ಎಕ್ಕೆಗೊಂದಿ ತಿಪ್ಪೇಸ್ವಾಮಿ. ನಡವಲಹಳ್ಳಿ. ಚನ್ನಪ್ಪ. ನಡವಲಹಳ್ಳಿ ಪಾಲಣ್ಣ. ಡಿಎಸ್ಎಸ್ ಅಧ್ಯಕ್ಷರು. ಚನ್ನಪ್ಪ.ಗಂಡ ಬೊಮ್ಮನಹಳ್ಳಿ. ಓಬಣ್ಣ.ಹೊನ್ನಪ್ಪ. ರಾಟಿಪಾಲಯ್ಯ. ತಿಪ್ಪೇಸ್ವಾಮಿ ರಣಧೀರ. ಸಿದ್ದೇಶ್. ಮಂಜಣ್ಣ ಸ್ವಾಮಿ. ಸೋಮಣ್ಣ. ಆರ್ ವೆಂಕಟೇಶ್. ಸೋಮಣ್ಣ. ಪೋಲಿಸ್ ಸಿಬ್ಬಂದಿ ವರ್ಗದವರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು
ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles