9.1 C
New York
Friday, October 18, 2024

ಚಿಕ್ಕ ಜಾಜೂರು ಗ್ರಾಮ ಪಂಚಾಯಿತಿಯಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ

ಹೊಳಲ್ಕೆರೆ : ತಾಲ್ಲೂಕು ಚಿಕ್ಕ ಜಾಜೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15 ನೇ ಹಣಕಾಸು ಆಯೋಗದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯು ನಡೆಯಿತು. ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಕೆ ಸಿ ಉಷಾದೇವಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ದೇಶಗಳು- 1)ಬೇಡಿಕೆಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತೀ ಕುಟುಂಬಕ್ಕೆ 100 ದಿನಗಳಿಗೆ ಕಡಿಮೆ ಇಲ್ಲದಂತೆ ಉದ್ಯೋಗ ಒದಗಿಸುವ ಮೂಲಕ ಉತ್ಪಾದನಾ ಶೀಲ ಆಸ್ತಿಗಳನ್ನು ಸೃಜಿಸುವುದು, ಈ ಯೋಜನೆಯಡಿ ಹೊಸದಾಗಿ ಕೂಸಿನ ಮನೆ ನಿರ್ಮಾಣ ಬಂದಿದೆ 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಪೌಷ್ಟಿಕ ಆಹಾರ,ಶುದ್ಧ ನೀರು,ಆಟದ ಪರಿಕರ ಒದಗಿಸುವುದಾಗಿದೆ, ಈ ಯೋಜನೆಯಡಿ 4 ಮುಖ್ಯ ಪ್ರವರ್ಗಗಳಡಿ 260 ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ, ಹಾಗೂ 15ನೇ ಹಣಕಾಸು ಆಯೋಗದ ಉದ್ದೇಶಗಳ ಕುರಿತು ವಿವರವಾಗಿ ಸಾರ್ವಜನಿಕರಿಗೆ ತಿಳಿಸಿದರು, ಸಭೆಯ ಅಧ್ಯಕ್ಷತೆಯನ್ನು ನೋಡೆಲ್ ಅಧಿಕಾರಿ ಮಲ್ಲೇಶ್ ಗ್ರಾಮದ ಹಿರಿಯ ಮುಖಂಡ ರಾಜಶೇಖರ್ ರವರು ವಯಿಸಿದ್ದರು, ಪಿ,ಡಿ,ಓ,ಜಯ್ಯಪ್ಪ,ಅಧ್ಯಕ್ಷರಾದ ಅಂಜಲಿ ಮೋಹನ್ ಶ್ರೀಕಾಂತ್ ಮಠದ್,ಗೋವಿಂದಪ್ಪ,ತಾಂತ್ರಿಕ ಇಂಜಿನಿಯರ್ ಬೀರಲಿಂಗೇಶ್ವರ,ಪವನ್,ರಾಜಶೇಖರ್,ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ : ನಾಗರಾಜ್ ಕೆ ಹೊಳಲ್ಕೆರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles