9.7 C
New York
Friday, October 18, 2024

ಯೋಗ ವ್ಯಾಯಾಮ ಕ್ರೀಡೆ ಯುವ ಪೀಳಿಗೆ ಮೈಗೂಡಿಸಿಕೊಳ್ಳಿ : ದೈಹಿಕ ಶಿಕ್ಷಕಿ ಅನುಲಾ

ಕೂಡ್ಲಿಗಿ : ಯೋಗ ನಿಯಮಿತ ಧೈಹಿಕ ವ್ಯಾಯಾಮದಿಂದ, ಮಾನಸಿಕ ಹಾಗೂ ಧೈಹಿಕವಾಗಿ ಸದೃಢ ಆರೋಗ್ಯ ಹೊಂದಬಹುದಾಗಿದೆ ಎಂದು. ಪಟ್ಟಣದ ಡಾ॥ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಧೈಹಿಕ ಶಿಕ್ಷಕರಾದ ಅನುಲಾ ರವರು ನುಡಿದರು. ತಮ್ಮ ವಸತಿ ಶಾಲಾವರಣದಲ್ಲಿ, ಶನಿವಾರದಂದು ವಿದ್ಯಾರ್ಥಿಗಳಿಗೆ ವ್ಯಾಯಾಮ ಹಾಗೂ ಯೋಗ ತರಬೇತಿಗಳನ್ನು ನೀಡುತ್ತಾ ಮಾತನಾಡಿದರು. ಯೋಗ ವ್ಯಾಯಾಮ ಕ್ರೀಡೆ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ, ಇದರಿಂದಾಗಿ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ಮತ್ತು ಉನ್ನತ ವಿದ್ಯಾಭ್ಯಾಸದ ನಂತರದ, ಯಾವುದೇ ಸರ್ಕಾರಿ ಖಾಸಗೀ ಉದ್ಯೋಗದ ಆಯ್ಕೆ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಪ್ರಥಮ ಪ್ರಾಶಸ್ತ್ಯ ದೊರಕಲಿದೆ. ಸೋಲು ಗೆಲುವು ಮುಖ್ಯವಲ್ಲ ಉತ್ತಮವಾಗಿ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಸೋಲೇ ಗೆಲುವಿನ ಸೋಪಾನ ಇಂದು ಸೋಲಾದರೆ ಮರಳಿ ಪ್ರಯತ್ನಿಸಿ ನಿರಂತರ ಶ್ರಮವಹಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದರು. ಯುವಕರೇ ಭಾರತದ ಭವಿಷ್ಯದ ಬಹು ದೊಡ್ಡ ಆಸ್ಥಿಯಾಗಿದ್ದಾರೆ, ಹೆಣ್ಣು ಗಂಡು ಎಂಬ ಭೇದ ಭಾವ ಬಿಡಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಅದಕ್ಕಾಗಿ ನಿರಂತರ ಅಭ್ಯಾಸ ಅನಿವಾರ್ಯ, ವೈಯಕ್ತಿಕ ಕ್ರೀಡೆ ಗುಂಪು ಕ್ರೀಡೆಗಳಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ದೈಹಿಕ ಶಿಕ್ಷಕರಾದ ಅನುಲಾ ಕರೆ ನೀಡಿದರು. ವಿದ್ಯಾರ್ಥಿಗಳು ಮೊದಲು ಸರ್ವರೂ ಸಮಾನತೆಯ ಮನೋಭಾವ ಹೊಂದಬೇಕು, ಒಗ್ಗಟ್ಟಿನಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಶಾಲೆಗೆ ತಾಲೂಕಿಗೆ ಜಿಲ್ಲೆಗೆ ಹೆಸರು ತರಬೇಕು. ಮುಂದೊಂದು ದಿನ ನಿರಂತರ ಪ್ರಯತ್ನ ದಿಂದ ರಾಜ್ಯ ಹಾಗೂ ರಾಷ್ಟ್ರ ಅಂತರ ರಾಷ್ಟ್ರೀಯ, ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆಗೈದು ನಾಡಿಗೆ ಕೀರ್ತಿ ತರಬೇಕಾಗಿದೆ ಎಂದರು. ಉತ್ತಮ ಉದ್ದೇಶ ಗುರಿ, ಉತ್ತಮ ಪ್ರಯತ್ಮ ನಿರಂತರ ಪ್ರಯತ್ನದಿಂದ, ಉತ್ತಮ ಸಾಧನೆ ಗೈಯ್ಯಲು ಸಾಧ್ಯ ಅದರಿಂದಾಗಿ ಉತ್ತಮ ಪ್ರಜೆಯಾಗಿ ಹೊರ ಹೊಮ್ಮಲು ಸಾಧ್ಯ ಎಂದರು. ವಸತಿ ಶಾಲೆಯ ಪ್ರಾಂಶುಪಾಲರಾದ ಶೋಭಾರವರು ಸೇರಿದಂತೆ, ಕವಿತಾ ಛಾಯ, ಅನುಷಾ, ಅಶ್ವಿನಿ, ಸುಧಾ, ವಿಮಲಾಕ್ಷಿ ವಸತಿ ಶಾಲೆಯ ಹಾಗೂ ಸಿಬ್ಬಂದಿಯವರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles