21.5 C
New York
Sunday, October 6, 2024

ಯಾಂತ್ರೀಕೃತ ಭತ್ತ ನಾಟಿಯ ಕ್ಷೇತ್ರ ಪಾಠಶಾಲೆ ಪ್ರಾತ್ಯಕ್ಷತೆಗೆ ಚಾಲನೆ ನೀಡಿದ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್

ಸಕಲೇಶಪು : ತಾಲ್ಲೂಕು, ಹಾನುಬಾಳು ಹೋಬಳಿಯ ದಬ್ಬೆಗದ್ದೆ ಗ್ರಾಮದ ಕಾಂತರಾಜು ಇವರ ಜಮೀನಿನಲ್ಲಿ ಭತ್ತದ ಬೆಳೆಯ ಯಾಂತ್ರೀಕೃತನಾಟಿಯ ಪ್ರಾತ್ಯಕ್ಷತೆಗೆ ಜಂಟಿ ಕೃಷಿ ನಿರ್ದೇಶಕರಾದ ರಮೇಶ್ ಕುಮಾರ್ ಚಾಲನೆ ನೀಡಿದರು. ಅವರು ಮಾತನಾಡಿ, ಮಲೆನಾಡು ಭಾಗಗಳಲ್ಲಿ ಭತ್ತದ ಬೆಳೆ ಉತ್ಪಾದನೆಯಲ್ಲಿ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಒಂದು ಪ್ರಮುಖವಾದ ಸಮಸ್ಯೆ. ಈ ನಿಟ್ಟಿನಲ್ಲಿ ಯಾಂತ್ರೀಕೃತ ಭತ್ತದ ನಾಟಿ ಮತ್ತು ಬೇಸಾಯ ಪದ್ಧತಿ ಒಂದು ಸುಧಾರಣಾ ತಾಂತ್ರಿಕತೆಯಾಗಿದ್ದು ಕರ್ನಾಟಕ ರಾಜ್ಯದ ನಾನಾ ಭಾಗಗಳಲ್ಲಿ ಈಗಾಗಲೇ ಪ್ರಗತಿಯಲ್ಲಿದೆ. ಯಾಂತ್ರ ನಾಟಿಯಲ್ಲಿ ಸಾಲಿನಿಂದ ಸಾಲು ಮತ್ತು ಗುಣಿಯಿಂದ ಗುಣಿಗೆ ನಿಖರ ಅಂತರ ಕಾಪಾಡುವುದರಿಂದ ಭತ್ತದ ಬೆಳೆಯ ಸಮಗ್ರ ಕೃಷಿ ನಿರ್ವಹಣೆಗೆ ಮತ್ತು ಉತ್ತಮ ಇಳುವರಿಗೆ ಇದು ಸಹಕಾರವಾಗಿದೆ. ಭತ್ತದ ನಾಟಿಯಂತ್ರ ಖರೀದಿಗೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಪ್ರತ್ಯೇಕವಾದ ಸರ್ಕಾರದ ಸಹಾಯದನ ಲಭ್ಯವಿದ್ದು, ಕೃಷಿ ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ.ಹಾಗೆಯೇ, ರೈತರು ಕೃಷಿ ಯಾಂತ್ರೀಕರಣ ಯೋಜನೆಯಡಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಸರ್ಕಾರದ ಸಹಾಯದನದಡಿಯಲ್ಲಿ ಪಡೆಯಲು ತಿಳಿಸಿದರು.

ಆತ್ಮ ಯೋಜನೆಯ ಕ್ಷೇತ್ರ ಪಾಠಶಾಲೆಯನ್ನು ವಿವಿಧ ಹಂತಗಳಲ್ಲಿ ಶಿಬಿರಾರ್ಥಿಗಳಿಗೆ ಆಯೋಜಿಸಿದ್ದು, ಪ್ರತೀ ಹಂತದಲ್ಲಿ ವಿವಿಧ ತಾಂತ್ರಿಕ ವಿಷಯಗಳನ್ನು ಕಲಿಯಲು ರೈತರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ಮಂಜುಳಾ ಮತ್ತು ಉಪ ಕೃಷಿ ನಿರ್ದೇಶಕಿ ಕೋಕಿಲ ತಿಳಿಸಿದರು.

ರೈತ ಫಲಾನುಭವಿ ಕಾಂತರಾಜು ಮಾತನಾಡಿ ಯಂತ್ರನಾಟಿ ನನ್ನ ಕೈ ಹಿಡಿದಿದೆ, ಸುಮಾರು ಆರು ವರ್ಷಗಳಿಂದ ಭತ್ತದ ಯಂತ್ರನಾಟಿಯನ್ನು ಸ್ವಂತ ಜಮೀನಿನಲ್ಲಿ ನೆರವೇರಿಸುತ್ತಿರುವ ಜೊತೆಗೆ ಇತರೆ ರೈತರ ಜಮೀನಿನಲ್ಲೂ ಕೂಡ ಬಾಡಿಗೆಯಾಗಿ ಮತ್ತು ಯಂತ್ರನಾಟಿಯ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿರುವೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಯು ಎಂ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ, 2024-25ನೇ ಸಾಲಿನ ಮುಂಗಾರು ಮಳೆ 1676 ಮಿ ಮಿ ವಾಡಿಕೆಗೆ, ಇಂದಿಗೆ 2947 ಮಿ ಮೀ ಮಳೆ ಯಾಗಿದ್ದು, 1.75 ರಷ್ಟರ ಅನುಪಾತದ ಮಳೆ ಹೆಚ್ಚಳವಾಗಿದೆ ಎಂದು ತಿಳಿಸುತ್ತಾ ಈ ವರ್ಷ ಸುಮಾರು 110 ಹೆಕ್ಟೇರ್ ವಿಸ್ತೀರ್ಣದಲ್ಲಿ ಸಕಲೇಶಪುರ ತಾಲೂಕಿನಾದ್ಯಂತ ಭತ್ತದ ಯಂತ್ರ ನಾಟಿ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ನೀಡಿ, ಭತ್ತದ ಸಾಮಾನ್ಯ ನಾಟಿ ಪದ್ದತಿ ಮತ್ತು ಯಾಂತ್ರೀಕೃತ ನಾಟಿ ಪದ್ಧತಿ ವ್ಯತ್ಯಾಸಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿಷಯ ತಜ್ಞರಾದ ಸವಿತಾ, ಕೃಷಿ ಅಧಿಕಾರಿಗಳಾದ ಚೆಲುವರಂಗಪ್ಪ, ಕೇಶವಮೂರ್ತಿ, ತಾಂತ್ರಿಕ ವ್ಯವಸ್ಥಾಪಕರಾದ ಶ್ರವಣ್,ಸುಷ್ಮಾ, ಬಸವರಾಜ್ ಮತ್ತು ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles