ಕೆ. ಜಿ. ಎಫ್ : ದೇಶದಾದ್ಯಂತ ಮಕ್ಕಳ ಕಲಿಕೆಯನ್ನು ಖಚಿತಪಡಿಸಿಕೊಳ್ಳುವ ಭದ್ರತೆಯ ಭಾಗವಾಗಿ ರೂಮ್ ಟು ರೀಡ್ ಇಂಡಿಯಾ ತನ್ನ ವಾರ್ಷಿಕ ಪ್ರಮುಖ ಅಭಿಯಾನ ಇಂಡಿಯಾ ಗೆಟ್ಸ್ ರೀಡಿಂಗ್ ಅನ್ನು ಭಾರತದ 12 ರಾಜ್ಯಗಳಲ್ಲಿ ಆಯೋಜಿಸುತ್ತಿದ್ದು. ಈ ವರ್ಷದ ಅಭಿಯಾನವು “ಪ್ರಾಥಮಿಕ ಹಂತದಲ್ಲಿ ಕಲಿಕೆಯ ಮಹತ್ವ” ವಿಷಯವಾಗಿದೆ ಎಂಬ ವಿಷಯದ ಸುತ್ತ ಹಲವಾರು ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದು ಓದುವ ಮಹತ್ವವನ್ನು ಸಾರುವ ಬಗ್ಗೆ “ಎಲ್ಲವನ್ನು ಬದಿಗಿಟ್ಟು ಓದೋಣ ಮನಸ್ಸಿಟ್ಟು” ಎಂಬ ಮಹತ್ತರ ಚಟುವಟಿಕೆಯನ್ನು ರೂಮ್ ಟು ರೀಡ್ ತನ್ನ ಎಲ್ಲಾ ಮಧ್ಯಸ್ಥಿಕೆಯ ಶಾಲೆಗಳಲ್ಲಿ ಎಲ್ಲರೂ ನಿಮಗೆ ಇಷ್ಟವಾದ ಕಥೆ ಪುಸ್ತಕವನ್ನು ಓದುವ ಮೂಲಕ ಕಾರ್ಯಕ್ರಮವನ್ನು ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿನ ಆಯ್ದ 12 ಶಾಲೆಗಳಲ್ಲಿ ಯಶಸ್ವಿಗೊಳಿಸಲಾಯಿತು. ಈ ಕಾರ್ಯಕ್ರಮವು ಆಗಸ್ಟ್ 15 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 8 ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನದಂದು ಮುಕ್ತಾಯಗೊಳ್ಳುತ್ತದೆ ಎಂದು ಕರ್ನಾಟಕ ರಾಜ್ಯ ರೂಮ್ ಟು ರೀಡ್ ನ ಹಿರಿಯ ಕಾರ್ಯಕ್ರಮ ಸಹಾಯಕರಾದ ಶ್ರೀಯುತ ಶ್ರೀಶೈಲ ಡಂಬಳ ತಿಳಿಸಿದರು.
ಇಂದಿನ ಕಾರ್ಯಕ್ರಮವನ್ನು ಸರ್ಕಾರಿ ಆಂಗ್ಲ ಹಿರಿಯ ಮಾದರಿ ಶಾಲೆ, ಬೆಮೆಲ್ ನಗರದ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಮತ್ತು ಸ್ವಯಂಸೇವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಓದುವ ಸಂಸ್ಕೃತಿಯ ಏಳಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ವಿವಿಧ ಚಟುವಟಿಕೆಗಳನ್ನು ಸಂಗ್ರಹಿಸಲಾಗಿದೆ. ಈ ಕೆಲವು ಪ್ರಮುಖ ಚಟುವಟಿಕೆಗಳಲ್ಲಿ ಮಕ್ಕಳೊಂದಿಗೆ ಓದುವ ವಚನ, ಓದುವ ಸಮಯ ಮತ್ತು ಇತರೆ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ರೂಮ್ ಟೂ ರೀಡ್ ಇಂಡಿಯಾ ನಿರ್ದಿಷ್ಟ ಸಮಯದವರೆಗೆ ಓದಲು ಹೆಚ್ಚಿನ ದಾಖಲೆಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದೆ.
ಶಾಲೆಯ ಮುಖ್ಯಶಿಕ್ಷಕಿಯರಾದ ಶ್ರೀಮತಿ ಉಮಾ ರವರು ಮಾತನಾಡಿ ಮಕ್ಕಳು ಹೆಚ್ಚು ಹೆಚ್ಚು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಯಾಕೆಂದರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ತಿಳಿಸಿದರು. ಕಾರ್ಯಕ್ರಮದ ಯಶಸ್ವಿಗೆ ಶಾಲೆಯ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಲಕ್ಷ್ಮಣ, ಎಲ್ಲಾ ಸಿಬ್ಬಂದಿ ವರ್ಗದವರ ಪಾತ್ರ ಬಹಳ ಮುಖ್ಯವಾಗಿದೆ ಮತ್ತು ಶಾಲೆಯ ವತಿಯಿಂದ ಉತ್ತಮ ಓದುಗರಿಗೆ ಬಹುಮಾನವನ್ನು ನೀಡಲಾಯಿತು ಎಂದು ರೂಮ್ ಟು ರೀಡ್‌ನ ಗ್ರಂಥಾಲಯ ಕಾರ್ಯಕ್ರಮ ಅಧಿಕಾರಿಯಾದ ಶ್ರೀಯುತ ಸುಧಾಕರ ಜಿ ಎನ್ ರವರು ತಿಳಿಸಿದರು.