ಬಳ್ಳಾರಿ : ಮಹಾನಗರದ 36ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವಪಲ್ಲೆ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಹಾಗೂ ಶಾಲೆಯ ವಿದ್ಯಾರ್ಥಿಗಳಿಂದ ಕೇಕ್ ಕತ್ತರಿಸಿ ಶಿಕ್ಷಕ ಸಿಬ್ಬಂದಿ ವರ್ಗಕ್ಕೆ ಸಿಹಿ ಹಂಚೋದರ ಮೂಲಕ ಆಚರಿಸಲಾಯಿತು.ಈ ಸಂದರ್ಭದಲ್ಲಿ ಈ ದಿನದ ವಿಶೇಷತೆ ಕುರಿತು ದತ್ತಾತ್ರೇಯ ಹಾಗೂ ರಾಜಶೇಖರ್ ಶಿಕ್ಷಕರು ತಮ್ಮ ಭಾಷಣದ ಮೂಲಕ ಸವಿವರವಾಗಿ ತಿಳಿಸಿದರು. ಹಾಗೂ ಎಸ್ಡಿಎಂಸಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಜೆ. ವಿ. ಮಂಜುನಾಥ್ ರವರು ಮಾತನಾಡಿ, ಈ ಪ್ರಪಂಚದಲ್ಲಿ ಯಾವುದಾದರೂ ಒಂದು ಆತ್ಮತೃಪ್ತಿಯ ಕೆಲಸವಿದ್ದರೆ ಅದು ಶಿಕ್ಷಕ ವೃತ್ತಿ ಎಂದು ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಎಲ್ಲಾ ತಂದೆ ತಾಯಂದಿರ ಹಾಗೂ ಪೋಷಕರ ಪರವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರುಗಳಾದ ಶ್ರೀ ಬಸವರಾಜ್ ಇಂದಿರಾ ಛಾಯಾ ದುರ್ಗಮ್ಮ ಸುಜಾತ ಹಾಗೂ ಅಡುಗೆ ಸಿಬ್ಬಂದಿ ವರ್ಗದವರಾದ ಕವಿತಾ ಭುವಮ್ಮ ಶಿವಮ್ಮ ಮತ್ತು ಕೆಲವು ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.