ಬಳ್ಳಾರಿ : ಬಳ್ಳಾರಿ ನಗರದ 23ನೇ ವಾರ್ಡ್ ಅಂಬೇಡ್ಕರ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹಾನಂದಿ ಕೊಟ್ಟಂ ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ಹಾಕಿ ಮಕ್ಕಳಿಗೆ ಸಿಹಿ ನೀಡುವುದರ ಮೂಲಕ ಸರಳವಾಗಿ, ಜನ್ಮದಿನವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಗಾಂಧಿನಗರ ಶಾಖೆಯು ಪ್ರತಿವರ್ಷದಂತೆ ಈ ವರ್ಷವೂ ಶಿಕ್ಷಕರ ದಿನಾಚರಣೆದಂದು ಶಾಲೆಯ
ಮುಖ್ಯ ಗುರುಗಳಾದ ಪಿ.ಎರೆಮ್ಮ ರವರಿಗೆ ಸನ್ಮಾನ ಮಾಡಲಾಯಿತು ಇದೇ ಸಂದರ್ಭದಲ್ಲಿ ಶಾಖೆಯ ಪ್ರಬಂಧಕರಾದ ಎಸ್ ರಾಜೇಶ್ ಕುಮಾರ್ ಮಾತನಾಡಿ ಎಲ್ಲಾ ಪ್ರಜೆಗಳು ಸಹ ತಮಗೆ ಬುದ್ಧಿವಾದ ಹೇಳಿ, ತಪ್ಪನ್ನು ತಿದ್ದಿ, ಪಾಠ ಹೇಳಿಕೊಟ್ಟ, ಅಕ್ಷರ ಕಲಿಸಿಕೊಟ್ಟ, ಜೀವನಕ್ಕೆ ಮಾರ್ಗದರ್ಶನ ನೀಡುವರು.
ಕಲ್ಲನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿಯಂತೆ ಮಕ್ಕಳ ಭವಿಷ್ಯವನ್ನು ರೂಪಿಸುವವರು ಈ ಶಿಕ್ಷಕರು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು.
ನಂತರದಲ್ಲಿ ಶಾಲಾ ಮುಖ್ಯಗುರುಗಳಾದ ಪಿ.ಎರಮ್ಮ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿಯೂ ಶಿಕ್ಷಕರ ಪಾತ್ರವು ಬಹು ದೊಡ್ಡದು. ಬದುಕನ್ನು ರೂಪಿಸಿದ ಶಿಕ್ಷಕರಿಗೆ ಧನ್ಯವಾದಗಳು ತಿಳಿಸಲು ಇದೊಂದು ಒಳ್ಳೆಯ ದಿನವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಗಾಂಧಿನಗರ ಶಾಖೆಯ ಪ್ರಬಂಧಕರಾದ ಎಸ್ ರಾಜೇಶ್ ಕುಮಾರ್ , ಹರಿಕ , ಕಿಶೋರ್ ಕುಮಾರ್ .ಟಿ , ರಾಘವೇಂದ್ರ , ಶಾಲಾ ಸಹ ಶಿಕ್ಷಕರಾದ ನಾಗರಾಜ , ಎಲ್ ಸಿದ್ದಲಿಂಗಮ್ಮ , ಎಂ ಪ್ರಮೀಳಾಬಾಯಿ , ಶಬಾನ , ಅತಿಥಿ ಶಿಕ್ಷಕರಾದ ಎಚ್ ವೈ ಅನಿತ , ಶಿಕ್ಷಣ ಪ್ರೇಮಿ ಮಹೇಶ್ ,ಅಡುಗೆ ಸಹಾಯಕರಾದ ಗೌರಮ್ಮ ರುದ್ರಮ್ಮ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.