ಹೊಳಲ್ಕೆರೆ : ಪಟ್ಟಣದ ಟೌನಲ್ ಗಣಪತಿಗೆ ಪಟ್ಟಣ ಶಾಖೆ ರೈತ ಸಂಘದ ವತಿಯಿಂದ ಪೂಜೆ, ಹೊಳಲ್ಕೆರೆ ಪಟ್ಟಣದಲ್ಲಿ ಶ್ರೀ ಗಜಾನನ ಸಂಘದ ವತಿಯಿಂದ 67 ನೇ ವರ್ಷದ ಗಣೇಶೋತ್ಸವ ಮಹಾ ಕಾರ್ಯಕ್ರಮದಲ್ಲಿ ರೈತ ಗಣಪತಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೊಳಲ್ಕೆರೆ ಪಟ್ಟಣ ಶಾಖೆಯ ಪದಾಧಿಕಾರಿಗಳಿಂದ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಪಟ್ಟಣದಲ್ಲಿ ಆರೋಗ್ಯ, ಶಾಂತಿ ,ನೆಲೆಸಲು ಮಳೆ ಬಂದು ಕೆರೆ – ಕಟ್ಟೆಗಳು ತುಂಬಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗಲು,ರೈತರ ಬಾಳು ಹಸನಾಗಲೆಂದು ಪ್ರಾರ್ಥಿಸಿ ಗಣೇಶನಿಗೆ ಕಡಲೆ ಕಾಳು ಹಾರ ಹಾಕಿ ಪುನೀತ್ ಶಾಸ್ತ್ರೀಜಿಯವರಿಂದ ಮಹಾ ಮಂಗಳಾರತಿ ಮಾಡಿಸಿ ಗಣೇಶನಿಗೆ ಪ್ರಿಯವಾದ ಕಡಲೆಕಾಳು ಪ್ರಸಾದ ಹಂಚಲಾಯಿತು, ನಂತರ 11ನೇ ವರ್ಷದ ವಿಶ್ವ ಹಿಂದೂ ಮಹಾ ಗಣಪತಿಗೆ ಪೂಜೆ ಮಾಡಿಸಿ ಪ್ರಸಾದ ಹಂಚಲಾಯಿತು ಪೂಜೆ ಮಾಡಿದ ನಂತರ ಹೊಳಲ್ಕೆರೆ ಪಟ್ಟಣದಲ್ಲಿ ಉತ್ತರೆ ಮಳೆ ಶುಭಾರಂಭ ಮಾಡಿತು ರೈತರೆಲ್ಲ ಹರ್ಷಪಟ್ಟರು, ಹಿಂದೂ ಮಹಾ ಗಣಪತಿಯ ಕಮಿಟಿಯಿಂದ ಪಟ್ಟಣದ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು, ಈ ಪೂಜೆಯಲ್ಲಿ ರೈತ ಸಂಘದ ಅಧ್ಯಕ್ಷ-ಎಸ್,ಸಿದ್ದರಾಮಪ್ಪ. ಪ್ರಧಾನಕಾರ್ಯದರ್ಶಿ-ಕೆ,ಎನ್,ಅಜಯ್,ಕಾರ್ಯಾಧ್ಯಕ್ಷ – ಅಣ್ಣಪ್ಪ,ಗೌರವಾಧ್ಯಕ್ಷ – ಸಿದ್ದರಾಮಪ್ಪ,ಶಿವಮೂರ್ತಿ,ಉಪಾಧ್ಯಕ್ಷ-ಲೋಕಪ್ಪ,ಗುರುರಾಜ್,ಖಜಾಂಚಿ-ಶಿವಮೂರ್ತಿ, ಅಯ್ಯನಕಟ್ಟೆಓಂಕಾರಪ್ಪ,ದುಕ್ಕಡ್ಲೆರವಿ,ಶೇಖರಪ್ಪ,ವೃಷಭಪ್ಪ,ಹಾಲಸ್ವಾಮಿ,ದೇವರಮನೆ ನಾರಪ್ಪ,ರಾಜೇಶ್,ವಡ್ಡನಾಳ ಹಾಲೇಶ್,ರಾಜಪ್ಪ, ಲೋಕಮಾನ್ಯ, ಅಬ್ಬಿಗೆರೆ ಬಸಪ್ಪ,ಕುಕ್ಕೇರ ಶಂಕರಪ್ಪ, ಶ್ರೀಧರ್ ಕೆ,ಮಲ್ಲಿಕಾರ್ಜುನ್ ನಾಡಿಗ್, ಕುಮಾರಾಚರ್,ಬಂಗೇರ ರಂಗಸ್ವಾಮಿ,ಭೀಮಣ್ಣ,ನಾಗರಾಜ್,ಮಂಜುನಾಥ್, ಕಾಲ್ಕೆರೆ ಕುಮಾರ್,ನೂರಾರು ರೈತರು ಭಾಗವಹಿಸಿದ್ದರು.
ವರದಿ ನಾಗರಾಜ್ ಕೆ ಹೊಳಲ್ಕೆರೆ