22.3 C
New York
Saturday, October 5, 2024

ಸ್ವಚ್ಚತೆಯೇ ಸೇವೆ ಅಭಿಯಾನಕ್ಕೆ ಚಾಲನೆ

ಹೊಳಲ್ಕೆರೆ : ಪುರಸಭೆಯಿಂದ ಸ್ವಚ್ಚತೆಯೇ ಸೇವೆ ಎಂಬ ಅಭಿಯಾನದ ಚಾಲನೆ “ಕೇಂದ್ರ ಸರ್ಕಾರ” “ಸ್ವಚ್ಚ ಭಾರತ್ ಅಭಿಯಾನ (ನಗರ), ನಗರಾಭಿವೃದ್ಧಿ ಇಲಾಖೆ” “ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು” ಹಾಗೂ “ಜಿಲ್ಲಾಡಳಿತ, ಚಿತ್ರದುರ್ಗ” ರವರ ಸೂಚನೆ/ನಿರ್ದೇಶನದಂತೆ “ಸ್ವಚ್ಚತೆಯೇ ಸೇವೆ” ಅಭಿಯಾನದಡಿ “ಸ್ವಭಾವ ಸ್ವಚ್ಚತೆ ಸಂಸ್ಕಾರ ಸ್ವಚ್ಚತೆ” ಎಂಬ ಕಾರ್ಯಕ್ರಮವನ್ನು ದಿನಾಂಕ:14.09.2024 ರಿಂದ ದಿ:02.10.2024ರವರೆಗೆ ಹೊಳಲ್ಕೆರೆ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಸ್ವಚ್ಚತಾ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸದರಿ ಅಭಿಯಾನದಡಿಯಲ್ಲಿ ದಿ:14.09.2024ರಂದು ಹೊಳಲ್ಕೆರೆ ಪಟ್ಟಣದ ಟೌನ್ ಗಣಪತಿ ಪ್ರತಿಷ್ಠಾಪಿತ ಸ್ಥಳದಲ್ಲಿ ಗಣಪತಿ ಆಶೀರ್ವಾದ ದೊಂದಿಗೆ “ಸ್ವಚ್ಚತೆಯೇ ಸೇವೆ” ಅಭಿಯಾನಕ್ಕೆ ಗಿಡ ನೆಡುವ ಹಾಗೂ ಸ್ವಚ್ಚತಾ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾರ್ವಜನಿಕ ಆಕರ್ಷಣೆಗಾಗಿ ಪಟ್ಟಣದ ಮುಖ್ಯ ಸ್ಥಳಗಳಲ್ಲಿ ಸೆಲ್ಫಿ ಪಾಂಟ್ ಸ್ಥಾಪಿಸಲಾಯಿತು.

ಈ ಸಮಯದಲ್ಲಿ ಮುಖ್ಯಾಧಿಕಾರಿಗಳಾದ ರಾಧ.ಆರ್ ರವರು ಮಾತನಾಡಿ ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರದ ಜೊತೆಗೆ ಸ್ವಚ್ಛ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು. ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರವನ್ನು ದೊರಕಿಸಿಕೊಟ್ಟರು, ಈಗ ದೇಶವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡುವ ಮೂಲಕ ಭಾರತ ದೇಶಕ್ಕೆ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಕಾರ್ಯನಿರ್ವಾಹಣ ಅಧಿಕಾರಿಗಳಾದ ವಿಶ್ವನಾಥ್ ರವರು ಈ ಸಮಯದಲ್ಲಿ ಮಾತನಾಡಿ ಸ್ವಚ್ಚತೆ ಕೇವಲ ಪುರಸಭೆಯ ಜವಾಬ್ದಾರಿಯಲ್ಲ ಸ್ವಚ್ಚತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರಾ ಜವಾಬ್ದಾರಿ ನಾವುಗಳು ವಾಸಮಾಡುವ, ಕೆಲಸ ಮಾಡುವ ಸ್ಥಳಗಳನ್ನು ಸ್ವಚ್ಚಗೊಳಿಸಿಕೊಂಡರೇ ಸಾಕು. ಪ್ರಯುಕ್ತ ಎಲ್ಲಾ ಇಲಾಖೆಗಳು/ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ತಮ್ಮ ತಮ್ಮ ಕಛೇರಿಗಳನ್ನು, ವಾಸವಿರುವ ಸ್ಥಳಗಳನ್ನು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಗೊಳಿಸಬೇಕೆಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷರಾದ ಆರ್.ಎ ಅಶೋಕ್ ರವರು ಮಾತನಾಡಿ ಕೇವಲ ಹೆಸರಿಗೆ ಮಾತ್ರ ಸ್ವಚ್ಚತೆ ಆಗಬಾರದು ಸರ್ಕಾರಿ ಕಾರ್ಯಕ್ರಮಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆಸಿಕೊಂಡು ಪಟ್ಟಣವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಹೊಳಲ್ಕೆರೆ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಬೇಕು ಎಂದು ತಿಳಿಸಿದರು.

ಮಾಜಿ ಉಪಾಧ್ಯಕ್ಷರಾದ ಕೆ.ಸಿ.ರಮೇಶ್ ರವರು ಮಾತನಾಡಿ ನಮ್ಮ ನಮ್ಮ ಮನೆಗಳು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮೆಲರ ಜಾವಾಬ್ದಾರಿ ನಮ್ಮ ಸುತ್ತ ಮುತ್ತ ನಾವು ಸ್ವಯಂ ಪ್ರೇರಿತರಾಗಿ ಸ್ವಚ್ಚವಾಗಿಟ್ಟುಕೊಂಡರೆ ಸಾಂಕ್ರಮೀಕ ರೋಗಗಳನ್ನು ನಾವು ತಡೆಗಟ್ಟಬಹುದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಈ ಸಮಯದಲ್ಲಿ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಹನುಮಂತಪ್ಪರವರು, ಸಾರ್ವಜನಿಕ ಆಸ್ಪತ್ರೆ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಶಿಶು ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು, ಸರ್ಕಾರಿ ಪ್ರಾಥಮಿಕ ಉರ್ದು ಮತ್ತು ಕನ್ನಡ ಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಆರೋಗ್ಯ ನಿರೀಕ್ಷಕರಾದ ಶೌಕತ್, ಸಿಬ್ಬಂದಿಗಳಾದ ಮಹೇಶ್ವರಪ್ಪ, ಪ್ರಶಾಂತ್.ಹೆಚ್, ನಾಗಭೂಷಣ್, ದೇವರಾಜ್, ಗಂಗಾಧರ್ ಮತ್ತು ಸಿಬ್ಬಂದಿಗಳು, ದಫೇದಾರ್ ಶಿವಕುಮಾರ್ ಹಾಗೂ ಪೌರಕಾರ್ಮಿಕರು, ವಾಹನ ಚಾಲಕರು, ನೀರು ಸರಬರಾಜು ಸಿಬ್ಬಂದಿ ಹಾಜರಾಗಿದ್ದರು.

ವರದಿ : ನಾಗರಾಜ್ ಕೆ ಹೊಳಲ್ಕೆರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles